ವರದಿ: ಗಣೇಶ್ ಹೆಗಡೆ
ಬೆಂಗಳೂರು: ಕಾರ್ತಿಕ ಮಾಸದ ಕೊನೆಯ ಸೋಮವಾರ ನಡೆಯುವ ಪ್ರಸಿದ್ಧ ಕಡಲೇಕಾಯಿ ಪರಿಷೆಗೆ ಬಿಬಿಎಂಪಿ ಅನುಮತಿ ನೀಡಲಿದೆ. ಇದೇ ತಿಂಗಳು 29 ರಿಂದ ಬಸವನಗುಡಿಯಲ್ಲಿ ಕಡಲೇಕಾಯಿ ಪರಿಷೆ ಜಾತ್ರೆ ಅರಂಭವಾಗಲಿದೆ.
ಕಳೆದ ವರ್ಷ ಕೊವೀಡ್ ಹೆಚ್ಚಿದ್ದ ಪರಿಣಾಮ ಕಡಲೇ ಕಾಯಿ ಪರಿಷೆ ನಡೆದಿರಲಿಲ್ಲ. ಅದರೆ ಈ ವರ್ಷ ಕೊರೊನಾ ಪ್ರಕರಣಗಳು ಕಡಿಮೆ ಅಗಿವೆ. ಈ ಹಿನ್ನೆಲೆಯಲ್ಲಿ ಪಾಲಿಕೆ ಅನುಮತಿ ನೀಡುತ್ತಿದ್ದು, ಕೊವೀಡ್ ನಿಯಮ ಪಾಲಿಸೋದು ಕಡ್ಡಾಯವಾಗಿದೆ.
ಕಡಲೇಕಾಯಿ ಪರಿಷೆಗೆ 10ಕ್ಕೂ ಅಧಿಕ ಜಿಲ್ಲೆಗಳು ಭಾಗವಹಿಸಲಿವೆ. ತಮಿಳುನಾಡು, ಅಂಧ್ರ ಪ್ರದೇಶದಿಂದ ಸಹಸ್ರಾರು ಜನರು ಪರಿಷೆಗೆ ಅಗಮಿಸಲಿದ್ದಾರೆ.
PublicNext
10/11/2021 01:17 pm