ಬೀದರ್:ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವ್ರು ಇವತ್ತು ಭಾಲ್ಕಿಯ ಕಲವಾಡಿ ಗ್ರಾಮದ ಸರ್ಕಾರಿ ಶಾಲೆಗೆ ದಿಢೀರ್ ಭೇಟಿಕೊಟ್ಟುಮಕ್ಕಳಿಗೆ ಆಶ್ಚರ್ಯ ಮೂಡಿಸಿದರು.ಬಿಸಿಯೂಟ ಬಡಿಸೋ ಮೂಲಕ ಮಕ್ಕಳಲ್ಲಿ ಹೊಸ ಉತ್ಸಾಹವನ್ನೂ ಮೂಡಿಸಿದರು.
ಶಿಕ್ಷಣ ಸಚಿವರು ಇಲ್ಲಿಯ ಸರ್ಕಾರಿ ಶಾಲೆಗೆ ದಿಢೀರನೆ ಭೇಟಿಕೊಟ್ಟರು. ಆದರೆ ಇಲ್ಲಿ ಬಂದು ಶಿಕ್ಷಕರನ್ನ ಬೈಯೋದಾಗಲಿ, ಶಾಲೆ ಸಿಬ್ಬಂದಿಗಳನ್ನ ತರಾಟೆಗೆ ತೆಗೆದುಕೊಳ್ಳೊದಾಗಲಿ ಯಾವುದನ್ನೂ ಮಾಡಲೇ ಇಲ್ಲ. ನೇರವಾಗಿ ಬಂದು ಮಕ್ಕಳ ಜೊತೆಗೆ ಬೆರೆತರು. ಮಕ್ಕಳೊಟ್ಟಿಗೆ ಮಕ್ಕಳಾದರು.ಅವರಿಗೆ ಊಟ ಬಡಿಸಿ ಊಟದ ರುಚಿಯನ್ನೂ ತಿಳಿದುಕೊಂಡರು. ಊಟ ಬಡಿಸ್ತಾ ಬಡಸ್ತಾನೇ ಮಕ್ಕಳ ಸಮಸ್ಯೆಗಳನ್ನೂ ಆಲಿಸಿ ಬಂದಿದ್ದಾರೆ ಸಚಿವ ಬಿ.ಸಿ.ನಾಗೇಶ್.
PublicNext
27/10/2021 07:49 pm