ದೀಪಾವಳಿ ಹಬ್ಬವನ್ನ ದೇಶದ ಹಲವೆಡೆ ಹಲವು ರೀತಿಯ ಆಚರಣೆ ಮಾಡ್ತಾರೆ. ಈ ಹಬ್ಬದಲ್ಲಿ ಎಲ್ಲರ ಸಂಭ್ರಮ ಎಲ್ಲೆ ಮೀರುತ್ತದೆ. ಆದ್ರೆ ಈ ಊರಲ್ಲಿ ಮಾತ್ರ ದೀಪಾವಳಿ ಹಬ್ಬವನ್ನ ನಾಯಿಗಳಿಗೆ ಪೂಜೆ ಮಾಡುವ ಮೂಲಕ ಆಚರಿಸಲಾಗುತ್ತೆ. ಅಷ್ಟೇ ಅಲ್ಲ. ಪೂಜೆ ಸಲ್ಲಿಸಿದ ನಾಯಿಗಳಿಗೆ ಸ್ವಾದಿಷ್ಟ ಭಕ್ಷ್ಯ ಭೋಜನ ನೀಡಲಾಗುತ್ತದೆ.
ಅಂದ್ ಹಾಗೆ ಇಂತಹ ವಿಚಿತ್ರ, ವಿಶಿಷ್ಟ ಆಚರಣೆ ಇರೋದು ನಮ್ಮೆ ನೆರೆ ರಾಷ್ಟ್ರ ನೇಪಾಳದ ರಾಜಧಾನಿ ಕಠ್ಮಂಡು ನಗರದಲ್ಲಿ. ಈ ಆಚರಣೆಯನ್ನು ಅಲ್ಲಿ ಕುಕ್ಕುರ್ ತಿಹಾರ್ ಎನ್ನುತ್ತಾರೆ.
ಅಲ್ಲಿನ ಪ್ರಾಣಿ ದಯಾ ಸಂಘವೊಂದರ ನೇತೃತ್ವದಲ್ಲಿ ಈ ಆಚರಣೆ ನಡೆಯುತ್ತದೆ. ಸಹಸ್ರಾರು ಜನ ತಮ್ಮ ಶ್ವಾನಗಳೊಂದಿಗೆ ಅಲ್ಲಿ ಜಮಾಯಿಸುತ್ತಾರೆ. ಎಲ್ಲರೂ ತಮ್ಮ ಶ್ವಾನಗಳಿಗೆ ಪೂಜೆ ಸಲ್ಲಿಸಿ ವಿಶೇಷ ಖಾದ್ಯಗಳನ್ನು ಉಣಬಡಿಸುತ್ತಾರೆ.
PublicNext
14/11/2020 07:39 pm