ಅಯೋಧ್ಯೆ : ಕೊರೊನಾ ಕಂಟಕದ ಮಧ್ಯೆಯೂ ಎಲ್ಲ ಕೆಲಸ ಕಾರ್ಯಗಳು ನಡೆಯುತ್ತಿವೆ.
ಇದಕ್ಕೆ ಹಬ್ಬ ಹರಿದಿನಗಳು ಹೊರತ್ತಲ್ಲ.
ಸದ್ಯ 'ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ನಿರ್ದೇಶನದ ಮೇರೆಗೆ ಈ ವರ್ಷದ ಅಯೋಧ್ಯೆಯಲ್ಲಿ ವರ್ಚುವಲ್ ದೀಪೋತ್ಸವಕ್ಕೆ ವ್ಯವಸ್ಥೆ ಮಾಡಲಾಗಿದೆ.
ಕೋವಿಡ್-19 ಕಾರಣದಿಂದಾಗಿ ಅಯೋಧ್ಯೆಗೆ ಬರಲಾಗದವರು ವೆಬ್ಸೈಟ್ ಮೂಲಕ ರಾಮ ಲಲ್ಲಾನ ಎದುರು ದೀಪ ಬೆಳಗಲು ಅವಕಾಶವಿದೆ' ಎಂದು ಯುಪಿ ಸಿಎಂ ಕಚೇರಿ ಟ್ವೀಟ್ ಮಾಡಿದೆ.
ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಇದೇ ಮೊದಲ ಬಾರಿಗೆ ದೀಪೋತ್ಸವ ಆಯೋಜಿಸಲಾಗುತ್ತಿದೆ.
ಕಳೆದ 500 ವರ್ಷಗಳಿಂದ ಬಾಕಿ ಇರುವ ಕಾರ್ಯಕ್ರಮ ಇದಾಗಿದೆ ಎಂದು ಉತ್ತರ ಪ್ರದೇಶ ಪ್ರವಾಸೋದ್ಯಮ ಸಚಿವ ನೀಲಕಂಠ ತಿವಾರಿ ಹೇಳಿದ್ದಾರೆ.
'ಈ ವರ್ಷದ ದೀಪೋತ್ಸವದಲ್ಲಿ 5 ಲಕ್ಷ ಹಣತೆಗಳನ್ನು ಬೆಳಗಲಾಗುವುದು' ಎಂದೂ ಅವರು ತಿಳಿಸಿದ್ದಾರೆ.
ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಅವರ ಮಾರ್ಗದರ್ಶನದಲ್ಲಿ ಯೋಗಿ ಆದಿತ್ಯನಾಥ ಅವರು ದೀಪೋತ್ಸವ ಆಚರಣೆ ಆರಂಭಿಸಿದ್ದಾರೆ.
2018ರಲ್ಲಿ ದೀಪೋತ್ಸವ ಗಿನ್ನೆಸ್ ದಾಖಲೆ ನಿರ್ಮಿಸಿತ್ತು.
PublicNext
09/11/2020 12:15 pm