ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾಡದೇವತೆಯ ಸರಳ ದಸರಾ ಮಹೋತ್ಸವಕ್ಕೆ ತೆರೆ

ಮೈಸೂರು : ಮೈಸೂರು ದಸರಾ ಎಷ್ಟೊಂದು ಸುಂದರ ಆ ಸುಂದರ ಸೊಬಗಿನ ಮೈಸೂರನ್ನು ಕಣ್ಣಾರೆ ನೋಡಿಯೇ ತಣಿಯಬೇಕು.

ಇನ್ನೂ ದಸರಾ ಅಂದಾಕ್ಷಣ ಮೈಸೂರು ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತದೆ.

ಆದರೆ ಈ ಬಾರಿ ಕೊರೊನಾ ಹಿನ್ನಲೆಯಲ್ಲಿ ಸರಳ ದಸರಾ ಆಚರಿಸಲಾಯಿತು.

ತಾಯಿ ಚಾಮುಂಡೇಶ್ವರಿಯನ್ನು ಬೆಟ್ಟದಿಂದ ಅರಮನೆಗೆ ತಂದು ಅಲ್ಲಿ ಪೂಜೆ ನೆರವೇರಿಸಲಾಯಿತು. ಸರ್ವಾಲಂಕಾರ ಭೂಷಿತೆಯಾಗಿ ತಾಯಿ ರಾರಾಜಿಸಿದ್ದಾಳೆ.

ಇನ್ನೂ ಸಾವಿರಾರು ಮಂದಿ ಮೈಸೂರಿಗೆ ಆಗಮಿಸಿ ತಾಯಿಯ ಆಶೀರ್ವಾದ ಪಡೆದರು.

ಪ್ರತಿ ವರ್ಷದಂತೆ ಜಂಬೂ ಸವಾರಿಯನ್ನು ಈ ಬಾರಿ ವೀಕ್ಷಿಸಲು ಸಾಧ್ಯವಾಗುತ್ತಿಲ್ಲ. ಸರಳ ಜಂಬೂ ಸವಾರಿಯನ್ನು ನಡೆಸಲಾಯಿತು.

ಒಂಬತ್ತನೇ ಹಾಗೂ ಕೊನೆಯ ದಿನವಾದ ಇಂದು ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ನಡೆಯುವುದರೊಂದಿಗೆ ದಸರಾ ಮಹೋತ್ಸವಕ್ಕೆ ತೆರೆಬಿದ್ದಿತು.

750 ಕಿಲೋ ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ಅಭಿಮನ್ಯು ಆನೆ ಮೆರವಣಿಗೆಯಲ್ಲಿ ಸಾಗಿತು.

ವಿಕ್ರಮ್ ಮತ್ತು ಗೋಪಿ ಆನೆಗಳು ಮೆರವಣಿಗೆಯ ಮೊದಲ ಸಾಲಿನಲ್ಲಿ ಹೆಜ್ಜೆ ಹಾಕಿದರು. ಮಧ್ಯಾಹ್ನ 3:21ಕ್ಕೆ ಪ್ರಾರಂಭವಾದ ಅಂಬಾರಿ ಮೆರವಣಿಗೆ 23 ನಿಮಿಷ ಕಾಲ ಸಾಗಿತು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 3:54ಕ್ಕೆ ಅಂತಿಮವಾಗಿ ಅಂಬಾರಿ ಮೇಲೆ ಪುಷ್ಪಾರ್ಚನೆ ಮಾಡಿದರು.

ಸ್ತಬ್ಧಚಿತ್ರ ಹಾಗೂ ಕಲಾ ತಂಡಗಳ ಮೆರವಣಿಗೆ 33 ನಿಮಿಷ ನಡೆಯಿತು. ಒಟ್ಟು 56 ನಿಮಿಷ ಕಾಲ ದಸರಾ ಜಂಬೂ ಸವಾರಿ ನಡೆಯಿತು.

Edited By : Nirmala Aralikatti
PublicNext

PublicNext

26/10/2020 07:10 pm

Cinque Terre

54.98 K

Cinque Terre

3