ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಾಯಿಯ ಕಣ್ಣೆದುರೇ ಅಪ್ರಾಪ್ತ ಮಗಳ ಮೇಲೆ ಐವರಿಂದ ಗ್ಯಾಂಗ್ ರೇಪ್

ರಾಂಚಿ: ತಾಯಿಯ ಕಣ್ಣೆದುರೇ ಅಪ್ರಾಪ್ತ ಮಗಳ ಮೇಲೆ ಐವರು ಸಾಮೂಹಿಕ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ಜಾರ್ಖಂಡ್‌ನ ದಿಯೋಘರ್ ಜಿಲ್ಲೆಯಲ್ಲಿ ನಡೆದಿದೆ.

ಸಂತ್ರಸ್ತೆಯು 15 ವರ್ಷದವಳಾಗಿದ್ದಾರೆ. ಬಾಲಕಿ ಹಾಗೂ ಆಕೆಯ ತಾಯಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದರು. ಈ ವೇಳೆ ಎರಡು ದ್ವಿಚಕ್ರ ವಾಹನಗಳಲ್ಲಿ ಬಂದ ಆರೋಪಿಗಳು ಇಬ್ಬರನ್ನೂ ಅಡ್ಡಗಟ್ಟಿ ಬಲವಂತವಾಗಿ ಪಕ್ಕಕ್ಕೆ ಕರೆದೊಯ್ದು ಬಾಲಕಿಯ ತಾಯಿಗೆ ಥಳಿಸಿದ್ದಾರೆ. ಬಳಿಕ ತಾಯಿಯ ಕಣ್ಣೆದುರೇ ಆರೋಪಿಗಳು ಬಾಲಕಿ ಮೇಲೆ ರೇಪ್ ಮಾಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿರುವ ಪೊಲೀಸರು ಈವರೆಗೂ ಇಬ್ಬರನ್ನು ಬಂಧಿಸಿದ್ದಾರೆ.

Edited By : Vijay Kumar
PublicNext

PublicNext

11/10/2022 03:20 pm

Cinque Terre

40.37 K

Cinque Terre

3

ಸಂಬಂಧಿತ ಸುದ್ದಿ