ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ಸರಗಳ್ಳತನ ಪ್ರಕರಣ: ಇಬ್ಬರ ಬಂಧನ, ಸ್ವತ್ತು ವಶ

ದಾವಣಗೆರೆ: ಸರಗಳ್ಳತನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಿಳಚೋಡು ಪೊಲೀಸರು ಬಂಧಿಸಿದ್ದಾರೆ.

ಚಿತ್ರದುರ್ಗ ತಾಲೂಕಿನ ಮಂಜುನಾಥ, ಮನೋಜ್ ಬಂಧಿತ ಆರೋಪಿಗಳು. ಕಳೆದ ಮೇ 25ರಂದು ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಮಡುಗು ಗ್ರಾಮದಿಂದ ಸುಷ್ಮಾ ಬಿ.ಎಸ್ ಎಂಬುವವರು ಪತಿ ರಮೇಶ್ ಜೊತೆ ಹೊಂಡಾ ಆಕ್ಟೀವಾದಲ್ಲಿ ಜಗಳೂರು-ದಾವಣಗೆರೆ ರಸ್ತೆಯಲ್ಲಿ ಬಿಳಿಚೋಡು ಕಡೆಗೆ ಬರುತ್ತಿರುವಾಗ ಪಲ್ಸರ್ ಮೋಟಾರ್ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಇವರನ್ನು ಹಿಂಬಾಲಿಸಿಕೊಂಡು ಬಂದು ಏಕಾಏಕಿ ಬಂದರು. ಈ ವೇಳೆ ಸುಷ್ಮಾ ಕೊರಳಿನಲ್ಲಿದ್ದ 46 ಗ್ರಾಂತೂಕದ, 2,೦೦,೦೦೦ ರೂ. ಬೆಲೆ ಬಾಳುವ ಬಂಗಾರದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿದ್ದರು. ಈ ಸಂಬಂಧ ಬಿಳಚೋಡು ಪೊಲೀಸರಿಗೆ ದೂರು ನೀಡಿದ್ದರು.

ಪ್ರಕರಣದ ಆರೋಪಿತರ ಪತ್ತೆಗೆ ದಾವಣಗೆರೆ ಗ್ರಾಮಾಂತರ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕಿ ಕನ್ನಿಕಾ ಸಿಕ್ರಿವಾಲ್, ಮಾರ್ಗದರ್ಶನದಲ್ಲಿ ಬಿಳಿಚೋಡು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಕೆ. ಸತ್ಯನಾರಾಯಣಸ್ವಾಮಿ ಹಾಗೂ ಅಧಿಕಾರಿ ಸಿಬ್ಬಂದಿ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ. ಬಂಧಿತರಿಂದ 5೦ ಗ್ರಾಂ ಬಂಗಾರದ ಆಭರಣವನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಐಕಾನ್- ಸರಗಳ್ಳರ ಬಂಧನ

Edited By : Nagaraj Tulugeri
PublicNext

PublicNext

02/09/2022 07:23 pm

Cinque Terre

63.74 K

Cinque Terre

0

ಸಂಬಂಧಿತ ಸುದ್ದಿ