ಗಾಂಧಿನಗರ: ನಡೆದುಕೊಂಡು ದೇವಸ್ಥಾನಕ್ಕೆ ಹೋಗ್ತಿದ್ದ ಆರು ಮಂದಿ ಭಕ್ತರು ಬೆಳ್ಳಂಬೆಳಗ್ಗೆ ವಿಧಿಯಾಟಕ್ಕೆ ದುರ್ಮರಣ ಹೊಂದಿದ ಘಟನೆ ಗುಜರಾತ್‌ನಲ್ಲಿ ನಡೆದಿದೆ.
ಅರಾವಳಿ ಜಿಲ್ಲೆಯ ಮಾಲ್ಪುರ್ ಎಂಬಲ್ಲಿನ ಕೃಷ್ಣನಗರದ ಅಂಬಾಜಿ ದೇವಸ್ಥಾನಕ್ಕೆ ನಡೆದುಕೊಂಡು ಹೋಗ್ತಿದ್ದ ಭಕ್ತರ ಮೇಲೆ ವೇಗವಾಗಿ ಬಂದ ಇನ್ನೋವಾ ಕಾರು ಹರಿದಿದೆ. ಪರಿಣಾಮ ಆರು ಮಂದಿ ಸಾವಿಗೀಡಗಿದ್ದಾರೆ. ಅಲ್ಲದೇ ಇತರೆ 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮೃತರೆಲ್ಲರೂ ದಾಹೋದ್ನ ಲಿಮ್ಖೇಡಾ ಮತ್ತು ಮಾಲ್ಪುರದವರು ಎಂದು ಗುರುತಿಸಲಾಗಿದೆ.
PublicNext
02/09/2022 11:15 am