ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಪ್ಪಳಕ್ಕಾಗಿ ಮದುವೆ ಮಂಟಪದಲ್ಲಿ ಭಾರಿ ಗಲಾಟೆ: ನಷ್ಟವಾಯ್ತು ಬರೋಬ್ಬರಿ 1.5 ಲಕ್ಷ.ರೂ

ಕೊಚ್ಚಿ: ಮದುವೆ ಸಮಾರಂಭದ ವೇಳೆ ಹೆಚ್ಚುವರಿ ಹಪ್ಪಳಕ್ಕಾಗಿ ನಡೆದ ಗಲಾಟೆಯಲ್ಲಿ ಟೇಬಲ್ಸ್​ ಮತ್ತು 25 ಕುರ್ಚಿಗಳಿಗೆ ಹಾನಿಯಾಗಿದ್ದು ಸೇರಿದಂತೆ ಕಲ್ಯಾಣ ಮಂಟಪಕ್ಕೆ ಸುಮಾರು 1.5 ಲಕ್ಷ ರೂಪಾಯಿ ನಷ್ಟವಾಗಿರುವ ಘಟನೆ ಕೇರಳದ ಹರಿಪಾದದಲ್ಲಿ ನಡೆದಿದೆ.

ಈ ಘಟನೆ ಮುತ್ತೊಮ್​ನಲ್ಲಿ ನಡೆದಿದೆ. ಮದುವೆ ವೇಳೆ ವರನ ಕಡೆಯವರು ಎರಡನೇ ಬಾರಿಗೆ ಹಪ್ಪಳವನ್ನು ಕೇಳಿದರು. ಇದು ಎರಡು ಗುಂಪಿನ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ವಾಗ್ವಾದ ಹೊಡೆದಾಟಕ್ಕೂ ತಿರುಗಿ, ಕಲ್ಯಾಣ ಮಂಟಪದಲ್ಲೇ ಎರಡು ಗುಂಪಿನವರು ಬಡಿದಾಡಿಕೊಂಡರು. ಗಲಾಟೆಯಲ್ಲಿ ಮಾಲೀಕರು ಸೇರಿದಂತ ಸುಮಾರು 20 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಮಂಟಪದ ಮಾಲೀಕರು ಎರಡು ಗುಂಪಿನ ನಡುವೆ ಮಾತನಾಡಿದ ಸಮಸ್ಯೆಯನ್ನು ಇತ್ಯರ್ಥಪಡಿಸಿದ್ದಾರೆ

Edited By : Abhishek Kamoji
PublicNext

PublicNext

31/08/2022 12:14 pm

Cinque Terre

31.31 K

Cinque Terre

4

ಸಂಬಂಧಿತ ಸುದ್ದಿ