ದಾವಣಗೆರೆ : ನಿನ್ನೆ ರಾತ್ರಿ ಪಲ್ಸರ್ ಬೈಕ್ ನಲ್ಲಿ ಬಂದಿದ್ದ ಯುವಕ-ಯುವತಿ ಕೆರೆಯ ಪಕ್ಕದಲ್ಲಿ ಬೈಕ್ ನಿಲ್ಲಿಸಿ ಕಾಣೆಯಾಗಿದ್ದರು. ಇಂದು ಇಬ್ಬರ ಮೃತದೇಹ ಕೆರೆಯಲ್ಲಿ ಪತ್ತೆಯಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬೆಂಕಿಕೆರೆ ಗ್ರಾಮದ ಬಳಿಯ ಕೆರೆಯಲ್ಲಿ ನಡೆದಿದೆ.
ಬೆಂಗಳೂರು ವಾಸಿ ನಾಗರತ್ನ (21), ಚರಣ್ (22) ಒಟ್ಟಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳಾಗಿದ್ದಾರೆ.
ಘಟನೆ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳೆದ ಎರಡು ವರ್ಷಗಳ ಹಿಂದೆಯೇ ಮೃತ ನಾಗರತ್ನ ಪ್ರಸನ್ನ ಕುಮಾರ್ ಎಂಬಾತನೊಂದಿಗೆ ಮದುವೆಯಾಗಿತ್ತು ಎನ್ನಲಾಗಿದೆ. ಇನ್ನು ಕಳೆದ ಎರಡು ದಿನಗಳ ಹಿಂದೆ ನಾಗರತ್ನ ನಾಪತ್ತೆಯಾಗಿದ್ದ ಬಗ್ಗೆ ಗಂಡ ಪ್ರಸನ್ನ ಕುಮಾರ್ ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
PublicNext
18/08/2022 12:35 pm