ಲಕ್ನೋ: ತನ್ನ ಕಾರಿಗೆ ಡಿಕ್ಕಿ ಹೊಡೆದ ಆರೋಪದ ಮೇಲೆ ಮಹಿಳೆಯೊಬ್ಬರು ಇ-ರಿಕ್ಷಾ ಚಾಲಕನಿಗೆ ಸುಮಾರು 17 ಬಾರಿ ಕಪಾಳಮೋಕ್ಷ ಮಾಡಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಹಿಳೆಯು ಇ-ಆಟೋ ಚಾಲಕನ ಕಾಲರ್ ಹಿಡಿದು ಕಾರಿಗೆ ಕರೆದೊಯ್ಯುವುದನ್ನು ವಿಡಿಯೋದಲ್ಲಿ ಕಾಣಬಹುದು. ಅಷ್ಟೇ ಅಲ್ಲದೆ ಚಾಲಕನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಅಷ್ಟೇ ಅಲ್ಲದೆ ಆಟೋ ಕೀ ತೆಗೆದುಕೊಳ್ಳುವುದನ್ನು ಹಾಗೂ ಆತನ ಜೇಬುಗಳನ್ನು ಬಲವಂತವಾಗಿ ಪರಿಶೀಲಿಸುವುದನ್ನು ಸಹ ಕಾಣಬಹುದಾಗಿದೆ.
PublicNext
13/08/2022 05:23 pm