ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಕಲಿ ವೈದ್ಯನ ಎಡವಟ್ಟಿಗೆ ಗರ್ಭ ಧರಿಸಿದ್ದ ಎಮ್ಮೆ, ಕರು ಸಾವು

ಬಾಗಲಕೋಟೆ: ನಕಲಿ ವೈದ್ಯನ ಎಡವಟ್ಟಿನಿಂದ ಗರ್ಭ ಧರಿಸಿದ್ದ ಎಮ್ಮೆ ಹಾಗೂ ಕರು ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಕನಸಗೇರಿ ಗ್ರಾಮದಲ್ಲಿ ನಡೆದಿದ್ದು, ನಕಲಿ ವೈದ್ಯನನ್ನು ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮಳಗಲಿ ಗ್ರಾಮದ ಶಿವಾನಂದ ಮಲ್ಲಪ್ಪ ರುದ್ರಪ್ಪನವರ ಬಂಧಿತ ನಕಲಿ ವೈದ್ಯ. ಜುಲೈ 26ರಂದು ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಮುಧೋಳ ತಾಲೂಕಿನ ಕನಸಗೇರಿ ಗ್ರಾಮದ ಹನುಮಂತ ಬಾಳಪ್ಪ ಪೂಜೇರಿ ಅವರಿಗೆ ಸೇರಿದ ಎಮ್ಮೆ ಗರ್ಭ ಧರಿಸಿ ಹಲವು ತಿಂಗಳಾಗಿತ್ತು. ಅನಾರೋಗ್ಯ ಕಾರಣ ಮಾಲೀಕರು ಪಶು ವೈದ್ಯರನ್ನು ಸಂಪರ್ಕಿಸಿದ್ದಾರೆ. ತಾನು ಪಶು ವೈದ್ಯ ಎಂದು ಹೇಳಿಕೊಂಡು ಬಂದ ಶಿವಾನಂದ ರುದ್ರಪ್ಪನವರ ಅವೈಜ್ಞಾನಿಕವಾಗಿ ಬ್ಲೇಡ್​ನಿಂದ ಶಸ್ತ್ರಚಿಕಿತ್ಸೆ ನಡೆಸಿದ್ದಾನೆ. ಇದರಿಂದ ತೀವ್ರ ರಕ್ತ ಸ್ರಾವವಾಗಿ ಎಮ್ಮೆ ಹಾಗೂ ಕರು ಮೃತಪಟ್ಟಿವೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮುಧೋಳ ಪಶು ಇಲಾಖೆ ವೈದ್ಯಾಧಿಕಾರಿಗಳು ಲೋಕಾಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

Edited By : Vijay Kumar
PublicNext

PublicNext

06/08/2022 09:01 pm

Cinque Terre

85.23 K

Cinque Terre

2

ಸಂಬಂಧಿತ ಸುದ್ದಿ