ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲವರ್ ಜೊತೆ ಸೇರಿ ಪತಿಗೆ ಮಸಣದ ಹಾದಿ ತೋರಿದ ಪತ್ನಿ

ಬಾಗಲಕೋಟೆ: ಜಿಲ್ಲೆ ಹುನಗುಂದ ತಾಲ್ಲೂಕಿನ ಕಮತಗಿ ಕ್ರಾಸ್​ ಬೈಕ್ ಸವಾರನಿಗೆ ಅಪರಿಚಿತ ವಾಹನ ಡಿಕ್ಕಿಯಾಗಿ ವ್ಯಕ್ತಿ ಸಾವು ಪ್ರಕರಣ ಸಂಬಂಧ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದ್ದು, ಸುಂದರ ಪತ್ನಿಯೇ ಹಂತಕಿ.

ಪ್ರವೀಣ ಸೇಬಣ್ಣವರ (30) ಕೊಲೆಯಾಗಿದ್ದ ವ್ಯಕ್ತಿ. ಪ್ರವೀಣನ ಪತ್ನಿ ನಿತ್ಯಾ ಹಾಗೂ ಆಕೆಯ ಪ್ರಿಯಕರ ರಾಘವೇಂದ್ರ ಬಂಧಿತ ಆರೋಪಿಗಳು. ಪ್ರೀತಿಸಿ ಮದುವೆಯಾಗಿದ್ದ ಪತ್ನಿ ನಿತ್ಯಾ. ಪ್ರೇಮ ವಿವಾಹವಾದರೂ ಬೇರೊಬ್ಬನ ಜೊತೆ ವಿವಾಹೇತರ ಸಂಬಂಧ ಇಟ್ಟುಕೊಂಡಿದ್ದ ಆರೋಪಿ ನಿತ್ಯಾ, ಆತನೊಂದಿಗೆ ಸೇರಿಕೊಂಡು ಪ್ಲಾನ್​ ಮಾಡಿ ಗಂಡನನ್ನೇ ಮುಗಿಸಿದ್ದಾಳೆ.

ಕಮತಗಿ ಕ್ರಾಸ್ ಬಳಿ ಜುಲೈ 2 ರಂದು ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಈ ಘಟನೆ ನಡೆದಿತ್ತು. ಕಾರಿನಲ್ಲಿ ಬಂದ ಪತ್ನಿ ಹಾಗೂ ಪ್ರಿಯಕರ ರಾಘವೇಂದ್ರ, ಪ್ರವೀಣ ಸೇಬಣ್ಣವರಗೆ ಡಿಕ್ಕಿ ಹೊಡೆಸಿ ಪರಾರಿಯಾಗಿದ್ದರು. ಈ ವೇಳೆ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಸೇಬಣ್ಣ, ತನ್ನ ಪತ್ನಿಗೆ ಕರೆ ಮಾಡಿ ನನಗೆ ಅಪಘಾತವಾಗಿದೆ ಎಂದಿದ್ದ. ಇದನ್ನು ತಿಳಿದ ನಿತ್ಯಾ, ಮತ್ತೆ ಕಾರು ತಿರುಗಿಸಿಕೊಂಡು ಬಂದು ಡಿಕ್ಕಿ ಹೊಡೆಸಿದ್ದಳು. ಕೊಲೆ‌ ಖಚಿತವಾದ ಬಳಿಕ ಇಬ್ಬರು ಎಸ್ಕೇಪ್​ ಆಗಿದ್ದರು.

ಮೇಲ್ನೋಟಕ್ಕೆ ಅಪಘಾತದಲ್ಲಿ ಮೃತಪಟ್ಟ ರೀತಿ ಶವ ಪತ್ತೆಯಾಗಿತ್ತು. ಆದರೆ, ಬೈಕ್ ಬಿದ್ದ ಜಾಗ ಹಾಗೂ ಶವದ‌ ಮೇಲಿನ ಗಾಯ ಕೊಲೆ ಶಂಕೆ ಮೂಡಿಸಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಅಮೀನಗಡ ಪೊಲೀಸರಿಗೆ ಅಸಲಿ ಸಂಗತಿ ತಿಳಿದಿದೆ. ಪತ್ನಿ ನಿತ್ಯಾ ಮೇಲೆ ಸಂಶಯ ಮೂಡಿ, ತೀವ್ರ ವಿಚಾರಣೆ ನಡೆಸಿದಾಗ ಆಕೆಯೇ ಕೊಲೆ ಮಾಡಿದ್ದಾಳೆ ಎಂಬುದು ತಿಳಿದುಬಂದಿದೆ ಎನ್ನಲಾಗಿದೆ.

Edited By : Vijay Kumar
PublicNext

PublicNext

19/07/2022 02:52 pm

Cinque Terre

39.25 K

Cinque Terre

5

ಸಂಬಂಧಿತ ಸುದ್ದಿ