ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

11 ಮದುವೆ ಆಗಿ ಇನ್ನೊಂದು ಮದುವೆಗೆ ತಯಾರಾಗಿದ್ದ ಮನ್ಮಥ ಸಿಕ್ಕಿಬಿದ್ದ

ಹೈದರಾಬಾದ್: ಈಗಿನ ಕಾಲದಲ್ಲಿ ಮದುವೆಗೆ ವಧು ಸಿಗೋದೇ ಕಷ್ಟ. ಬ್ರೋಕರ್‌ಗಳನ್ನು ಹಿಡಿದು, ಆನ್‌ಲೈನ್ ಮ್ಯಾಟ್ರಿಮೊನಿ, ಕುಟುಂಬಸ್ಥದ ಹುಡುಕಾಟ ಅದು ಇದು ಸೇರಿ ಸಾವಿರಾರು ರೂ ಖರ್ಚು ಮಾಡ್ತಾರೆ‌. ಆದರೂ ಕೆಲವರಿಗೆ ಮದುವೆ ಆಗ್ತಾ ಇಲ್ಲ.

ಆದ್ರೆ ಇಲ್ಲೊಬ್ಬ ಭೂಪ ಒಂದಲ್ಲ ಎರಡಲ್ಲ..ಬರೋಬ್ಬರಿ 11 ಮದುವೆ ಆಗಿದ್ದಾನೆ. ಈತನ ಹೆಸರು ಅಡಪ ಶಿವಶಂಕರ್. ಆಂಧ್ರದ ಗುಂಟೂರು ಜಿಲ್ಲೆಯ ಬೇತಂಪುಡಿಯ ಈತ ಉನ್ನತ ಶಿಕ್ಷಣ ಪಡೆದಿದ್ದಾನೆ.

ಸಚಿವರೊಬ್ಬರ ಸಂಬಂಧಿಯೂ ಆಗಿರುವ ಈತ ತಾನು ದೊಡ್ಡ ಕಂಪನಿಯಲ್ಲಿ ಕೆಲಸ ಮಾಡೋದಾಗಿ ಹೇಳಿ ಮದುವೆ ಶ್ರೀಮಂತರ ಮನೆಯ ಯುವತಿಯರನ್ನು ಒಪ್ಪಿಸಿ ಮದುವೆ ಆಗಿದ್ದಾನೆ‌. ಹೀಗೆ 11 ಮದುವೆ ಆದ ಈತನ ಅಸಲಿಯತ್ತು ಕೊನೆಗೂ ಬಯಲಾಗಿದೆ. 11 ಮದುವೆ ನಂತರ ಇನ್ನೊಂದು ಮದುವೆ ಆಗುವಾಗ ಈತನ ಪತ್ನಿಯರಲ್ಲಿ ಒಬ್ಬಾಕೆಗೆ ಅನುಮಾನ ಬಂದಿದೆ. ನಂತರ ಮ್ಯಾಟ್ರಿಮೊನಿ ವೆಬ್‌ಸೈಟ್‌ನಲ್ಲಿ ಪರಿಶೀಲಿಸಿದಾಗ ಈತ ಮತ್ತೊಂದು ಕಡೆ ಗಾಳ ಹಾಕುತ್ತಿರುವುದು ಗೊತ್ತಾಗಿದೆ.

ಈ ಎಲ್ಲ ಬೆಳವಣಿಗೆಗಳ ನಂತರ ಈತನ ಪತ್ನಿಯರೆಲ್ಲ ಸೇರಿ ಮಾಧ್ಯಮಗೋಷ್ಟಿ ನಡೆಸಿ ಮನ್ಮಥ ಪತಿರಾಯನ ಹಕೀಕತ್ತನ್ನು ಹೇಳಿದ್ದಾರೆ.‌ ಹಾಗೂ ಶಿವಶಂಕರನ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

Edited By : Nagaraj Tulugeri
PublicNext

PublicNext

14/07/2022 03:22 pm

Cinque Terre

91.21 K

Cinque Terre

17

ಸಂಬಂಧಿತ ಸುದ್ದಿ