ಶಿವಮೊಗ್ಗ: ಬಜರಂಗ ದಳ ಕಾರ್ಯಕರ್ತ ಹರ್ಷಾ ಕೊಲೆ ಮಾಸುವ ಮುನ್ನವೇ, ಶಿವಮೊಗ್ಗದಲ್ಲಿ ಮತ್ತೊಬ್ಬ
ಬಜರಂಗ ದಳದ ಕಾರ್ಯಕರ್ತನ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ.
ಹಲ್ಲೆಗೊಳಗಾದ ಯುವಕ ಬೇರೆ ಯಾರೋ ಅಲ್ಲ. ಕೊಲೆಯಾದ ಹರ್ಷನ ಸ್ನೇಹತನೇ ಆಗಿದ್ದಾರೆ. ಈತನ ಹೆಸರು ಕಾಂತರಾಜು (27) ನಿನ್ನೆ ತಡ ರಾತ್ರಿ ಈತನ ಮೇಲೆ ಐವರಿಂದ ದಾಳಿ ಆಗಿದೆ.
ಇಲ್ಲಿಯ ರಾಜೀವ ಗಾಂಧೀ ಬಡಾವಣೆಯಲ್ಲಿ ಮಚ್ಚು ಮತ್ತು ಬ್ಯಾಟ್‌ನಿಂದಲೇ ಕಾಂತರಾಜು ಮೇಲೆ ಹಲ್ಲೆ ಮಾಡಲಾಗಿದೆ.ಈ ಒಂದು ದಾಳಿಯಲ್ಲಿ ಕಾಂತರಾಜು ಬಲಗೈ ಮತ್ತು ಬಲಗಾಲಿಗೆ ಗಂಭೀರಗಾಯಗಳಾಗಿವೆ.
ಕಾಂತರಾಜು ಸದ್ಯ ಬಿಜೆಪಿಯ ಬೂತ್ ಕಮಿಟಿ ಅಧ್ಯಕ್ಷನಾಗಿದ್ದಾನೆ.ಹಳೆ ದ್ವೇಷದ ಮೇಲೆನೆ ಕಾಂತರಾಜು ಮೇಲೆ ದಾಳಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
PublicNext
12/07/2022 02:52 pm