ಮಂಡ್ಯ: ಮಕ್ಕಳ ಎದುರಲ್ಲೇ ಪತ್ನಿಯ ಕುತ್ತಿಗೆಯನ್ನು ಬಿಗಿದು ಪತಿಯೇ ಕೊಲೆಗೈದ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗೆಂಡೆಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.
ಯೋಗಿತಾ (27) ಕೊಲೆಯಾದ ಮಹಿಳೆ, ರವಿ ಗೌಡನಿಂದ ಕೊಲೆಗೈದ ಪತಿ. ಕೃತ್ಯದ ಬಳಿಕ ಆರೋಪಿ ರವಿ ಸ್ಥಳದಿಂದ ಪರಾರಿಯಾಗಿದ್ದಾನೆ. ಪತ್ನಿ ಯೋಗಿತಾ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ರವಿ ಆಗಾಗ ಜಗಳ ಮಾಡುತ್ತಿದ್ದ. ಅಷ್ಟೇ ಅಲ್ಲದೆ ಆಕೆಯನ್ನು ಮನೆಯಿಂದ ಹೋಗುವಂತೆ ದೈಹಿಕ, ಮಾನಸಿಕ ಹಿಂಸೆ ನೀಡುತ್ತಿದ್ದನಂತೆ. ಬುಧವಾರ (ನಿನ್ನೆ) ರಾತ್ರಿಯೂ ಮತ್ತೆ ಗಂಡ ಹೆಂಡತಿ ನಡುವೆ ಜಗಳ ಆರಂಭವಾಗಿದ್ದು, ಮಕ್ಕಳಿಗೆ ಪಾನಿಪುರಿ ತಿನ್ನಿಸುತ್ತಿದ್ದ ಪತಿ ರವಿ ಏಕಾಏಕಿ ಪತ್ನಿಯನ್ನು ರೂಮ್ಗೆ ಎಳೆದುಕೊಂಡು ಹೋಗಿ ಕತ್ತು ಬಿಗಿದು ಕೊಲೆ ಮಾಡಿದ್ದಾನೆ. ತಾಯಿ ಸ್ಥಿತಿಯನ್ನು ಕಂಡ ಹೆದರಿದ ಮಕ್ಕಳು ಮನೆಯಿಂದ ಹೊರ ಬಂದು ಅಕ್ಕಪಕ್ಕದ ಮನೆಯವರಿಗೆ ಮಾಹಿತಿ ನೀಡಿದ್ದಾಗ ಘಟನೆ ಬೆಳಕಿಗೆ ಬಂದಿದೆ.
ರವಿ ಬೇರೊಂದು ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ಅದರಿಂದಲೇ ಪತ್ನಿಗೆ ಮನೆಯಿಂದ ಹೊರಹೋಗುವಂತೆ ಹಿಂಸೆ ನೀಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ಅರಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಇಬ್ಬರು ಮಕ್ಕಳು ಅನಾಥರಾಗಿದ್ದಾರೆ.
PublicNext
07/07/2022 10:01 am