ಕೊಪ್ಪಳ: ಕೊಪ್ಪಳದ ಕಿಡಿದಾಳ ರೈಲ್ವೆಗೇಟ್ ಬಳಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಎಂಬಿಬಿಎಸ್ ವಿದ್ಯಾರ್ಥಿನಿಯೊಬ್ಬಳು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ.
ಬಳ್ಳಾರಿಯ ಸಾಹಿತಿ ವಿನೋದ ಕರ್ಣಂ ಅವರ ಪುತ್ರಿ ತೇಜಸ್ವಿ ಶ್ರೀ (23) ಮೃತ ದುರ್ದೈವಿ. ತೇಜಸ್ವಿ ಶ್ರೀ ಕೊಪ್ಪಳದ ಕಿಡಿದಾಳ ರೈಲ್ವೆಗೇಟ್ ಬಳಿ ಗಾಯಗೊಂಡ ಸ್ಥಿತಿಯಲ್ಲಿ ನಿನ್ನೆ (ಶನಿವಾರ) ಪತ್ತೆಯಾಗಿದ್ದಳು. ಸ್ಥಳೀಯರು ಆಕೆಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಆಸ್ಪತ್ರೆಯಲ್ಲಿ ತೇಜಸ್ವಿ ಶ್ರೀ ಸಾವನ್ನಪ್ಪಿದ್ದಾರೆ.
ವಿದ್ಯಾರ್ಥಿನಿ ಸಾವಿನ ಸುತ್ತಾ ಹಲವು ಅನುಮಾನಗಳು ಮೂಡಿದ್ದು, ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
PublicNext
03/07/2022 01:33 pm