ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

Video: ಚಿನ್ನಾಭರಣ ಅಂಗಡಿಗೆ ನುಗ್ಗಿದ ದರೋಡೆಕೋರರು-ಮಾಲೀಕನನ್ನೆ ಗುಂಡಿಕ್ಕಿ ಕೊಂದೇ ಬಿಟ್ಟರು !

ಪಟನಾ: ಚಿನ್ನಾಭರಣ ಅಂಗಡಿಗೆ ನುಗ್ಗಿದ ದರೋಡೆಕೋರರು ಮಾಲೀಕನಿಗೆ ಗುಂಡಿಕಿ ಕೊಂದು ಹಾಕಿದ್ದಾರೆ. ಈ ಒಂದು ಭೀಕರ ದೃಶ್ಯ ಇಲ್ಲಿಯೇ ಇದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬಿಹಾರದ ಹೃದಯಭಾಗವೇ ಆಗಿರೋ ಹಾಜಿಪುರ್ ನಗರದಲ್ಲಿಯೇ ಈ ಒಂದು ಭೀಕರ ಘಟನೆ ನಡೆದು ಹೋಗಿದೆ. ದುರಂತವೆಂದ್ರೆ ಈ ಚಿನ್ನಾಭರಣ ಅಂಗಡಿ ಇರೋದು ಜನನೀಬೀಡ ಪ್ರದೇಶವೇ ಆಗಿದೆ. ಆದರೂ ಇಂತಹ ಒಂದು ಕೃತ್ಯ ನಡೆದಿದೆ.

ಚಿನ್ನಾಭರದ ಅಂಗಡಿ ಎಂದಿನಂತೆ ತೆರೆದೆಯಿತ್ತು. ಗ್ರಾಹಕರೂ ಕೂಡ ಅಂಗಡಿಯೊಳಗೆ ಇದ್ದರು. ಆದರೂ ದರೋಡೆಕೋರರು ಒಬ್ಬರಾಗಿ ಒಳಗೆ ನುಗ್ಗಿದ್ದಾರೆ. ಗ್ರಾಹಕರನ್ನ ಥಳಿಸಿದ್ದಾರೆ.

ಮಾಲೀಕನನ್ನೂ ಸುನೀಲ್ ಪ್ರಿಯದರ್ಶನ್‌ರನ್ನ ಹೊಡೆಯೋ ದರೋಡೆಕೋರರು ಗುಂಡು ಹಾರಿಸಿ ಕೊಂದೇ ಬಿಡ್ತಾರೆ. ಬಳಿಕ ಚಿನ್ನಾಭರಣವನ್ನ ತೆಗೆದುಕೊಂಡು ಪರಾರಿಯಾಗಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Edited By :
PublicNext

PublicNext

27/06/2022 08:18 am

Cinque Terre

126.15 K

Cinque Terre

0

ಸಂಬಂಧಿತ ಸುದ್ದಿ