ಬೆಳಗಾವಿ: ಮದುವೆಯಾಗಲು ಕನ್ಯೆ ಸಿಗಲಿಲ್ಲವೆಂದು ಯುವ ರೈತನೋರ್ವ ಮರಕ್ಕೆ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆ ಹುಕ್ಕೇರಿ ತಾಲೂಕಿನ ಯಲ್ಲಾಪುರ ಗ್ರಾಮದಲ್ಲಿ ನಡೆದಿದೆ.
ಯಲ್ಲಾಪುರದ ಕರಗುಪ್ಪಿ ಬಾಳಪ್ಪ ಪಾಟೀಲ್ ಕೊನೆಯ ಮಗ 25 ವರ್ಷದ ರಮೇಶ್ ಪಾಟೀಲ್ ಆತ್ಮಹತ್ಯೆಗೆ ಶರಣಾದ ಯುವ ರೈತ. ಬಾಳಪ್ಪ ಪಾಟೀಲ್ ಅವರಿಗೆ ಮೂರು ಜನ ಮಕ್ಕಳು, ಮದುವೆ ವಯಸ್ಸಿಗೆ ಬಂದ ಕಾರಣ ಹೆಣ್ಣು ನೋಡಲು ತಂದೆ ತಾಯಿ ಶುರುಮಾಡಿದ್ದರು. ಹೋದ ಕಡೆಯಲ್ಲ ಸರ್ಕಾರಿ ನೌಕರಿ, ಶಾಲೆ ಕಲಿತು ಉದ್ಯೋಗದಲ್ಲಿದ್ರೆ ಮಾತ್ರ ಹೆಣ್ಣು ಕೊಡುತ್ತೇವೆ ಅಂತ ಹೇಳಿದ್ದರಂತೆ. ಇದರಿಂದ ರಮೇಶ್ ಮದುವೆ ಆಗಲಿಲ್ಲ ಅಂತ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಇದರಿಂದಲೇ ತಮ್ಮ ತೋಟದ ಮಾವಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
PublicNext
20/06/2022 12:30 pm