ತುಮಕೂರು: ಜಿಲ್ಲೆ ಗುಬ್ಬಿ ಪಟ್ಟಣದ ಬಿ.ಎಸ್.ರಸ್ತೆಯಲ್ಲಿ ಹಾಡಹಗಲೇ ಡಿಎಸ್ ಎಸ್ (DSS) ಮುಖಂಡ, ಗುಬ್ಬಿ ಪಟ್ಟಣ ಪಂಚಾಯಿತಿ 9ನೇ ವಾರ್ಡ್ ನ ಮಾಜಿ ಸದಸ್ಯ ನರಸಿಂಹಮೂರ್ತಿ ಅಲಿಯಾಸ್ ಕುರಿಮೂರ್ತಿ(45) ಬರ್ಬರ ಹತ್ಯೆ ನಡೆದಿದೆ.
ಇಂದು ಮಧ್ಯಾಹ್ನ ಗುಬ್ಬಿ ಪಟ್ಟಣ ಬಿ.ಎಸ್ ರಸ್ತೆಯಲ್ಲಿ ಟೀ ಅಂಗಡಿ ಮುಂದೆ ಕುಳಿತ್ತಿದ್ದ ವೇಳೆ ಕುರಿಮೂರ್ತಿ ಮೇಲೆ ದುಷ್ಕರ್ಮಿಗಳು ಅಟ್ಯಾಕ್ ಮಾಡಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಸ್ಥಳಕ್ಕೆ ಗುಬ್ಬಿ ತಾಲೂಕಿನ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
PublicNext
15/06/2022 05:49 pm