ಬೆಂಗಳೂರು: ಪಿಎಸ್‌ಐ ನೇಮಕಾತಿ ಪ್ರಕರಣದಲ್ಲಿ ಮೋಸ್ಟ್ ಕಾಂಟ್ರವರ್ಷಿಯಲ್ ಆರೋಪಿ ದರ್ಶನ್ ಗೌಡನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ರಾಮನಗರ ಜಿಲ್ಲೆಯ ಮಾಗಡಿ ಮೂಲದ ದರ್ಶನ್ ಗೌಡ ಪೊಲೀಸರ ವಿಚಾರಣೆ ವೇಳೆ ಸಚಿವರೊಬ್ಬರ ಹೆಸರು ಹೇಳಿದ್ದ. ಬಳಿಕ ಸಿಐಡಿಯವರು ಬಿಟ್ಟು ಕಳಿಸಿದ್ದಕ್ಕೆ ಕಾಂಗ್ರೆಸ್ನವರು ಸಚಿವ ಅಶ್ವತ್ಥ್, ಸಹೋದರ ಸತೀಶ್ ವಿರುದ್ಧ ಆರೋಪಿಸಿದ್ದರು. ನಿನ್ನೆ ದರ್ಶನ್ ಗೌಡನನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದು, ಇಂದು ಅಧಿಕೃತವಾಗಿ ಬಂಧಿಸಿದ್ದಾರೆ.
ಯಲಹಂಕ ನ್ಯೂಟೌನ್ ಕೇಸ್ ಸಂಬಂಧ ದರ್ಶನ್ ಗೌಡ ಅರೆಸ್ಟ್ ಆಗಿದ್ದು, ಹೊಸದಾಗಿ 3 ಆರೋಪಿಗಳನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ದರ್ಶನ್ ಗೌಡ, ಹರೀಶ್, ಮೋಹನ್‌ನನ್ನು ಬಂಧಿತರು. ಪ್ರತ್ಯೇಕವಾಗಿ ಮೂರು ಕೇಸ್ ದಾಖಲಿಸಿ ಆರೋಪಿಗಳ ಬಂಧನ ಮಾಡಿದ್ದು, ಬೆಂಗಳೂರಿನ ರಾಮಮೂರ್ತಿನಗರ, ಕೋರಮಂಗಲ ಠಾಣೆ, ಯಲಹಂಕ ನ್ಯೂಟೌನ್ ಠಾಣೆಯಲ್ಲಿ ಪ್ರತ್ಯೇಕ ಕೇಸ್ ದಾಖಲು ಮಾಡಲಾಗಿದೆ.
PublicNext
06/06/2022 11:49 am