ಢಾಕಾ: ಬಾಂಗ್ಲಾದೇಶದ ಖಾಸಗಿ ಕಂಟೇನರ್ ಡಿಪೋವೊಂದರಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು ಕನಿಷ್ಠ 16 ಮಂದಿ ಸಾವನ್ನಪ್ಪಿದ್ದು, 450ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಚಿತ್ತಗಾಂವ್‌ನ ಸೀತಾಕುಂದ ಉಪಾಜಿಲ ಆಡಳಿತ ವಿಭಾಗದ ಕದಮ್‌ರಸೂಲ್ ಪ್ರದೇಶದಲ್ಲಿರುವ 'ಬಿಎಂ ಕಂಟೇನರ್ ಡಿಪೋ'ದಲ್ಲಿ ಶನಿವಾರ ರಾತ್ರಿ 9ಕ್ಕೆ ಬೆಂಕಿ ಕಾಣಿಸಿಕೊಂಡಿದೆ. ರಾತ್ರಿ 11.45ರ ಸುಮಾರಿಗೆ ಭಾರಿ ಸ್ಫೋಟ ಸಂಭವಿಸಿದೆ. ಕಂಟೇನರ್‌ನಲ್ಲಿ ಕೆಮಿಕಲ್ ಇದ್ದಿದ್ದರಿಂದ ಒಂದರಿಂದ ಮತ್ತೊಂದಕ್ಕೆ ಬೆಂಕಿ ಹೊತ್ತಿಕೊಂಡು, ಸುತ್ತಲೂ ಆವರಿಸಿದೆ. ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ ನೂರಾರು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
PublicNext
05/06/2022 12:24 pm