ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಅಕ್ರಮ ಬಂದೂಕಿಗಿತ್ತು ಗುಂಡಿನ ದಾಳಿಯ ನಂಟು: ರಹಸ್ಯ ಕೇಳಿ ಪೊಲೀಸರು ಕಕ್ಕಾಬಿಕ್ಕಿ!

ಹಾವೇರಿ: ಅಕ್ರಮವಾಗಿ ಬಂದೂಕು ಇಟ್ಟುಕೊಂಡಿದ್ದ ಅಂತ ಆತನನ್ನು ಪೊಲೀಸರು ಬಂಧಿಸಿದ್ದರು. ಆದರೆ ಆತ ಬಾಯಿ ಬಿಟ್ಟ ಸತ್ಯ ಕೇಳಿ ಒಂದು ಕ್ಷಣ ಉತ್ತರ ಕನ್ನಡ ಜಿಲ್ಲೆಯ ಪೊಲೀಸರೆ ಶಾಕ್ ಆಗಿದ್ದರು. ಅಷ್ಟಕ್ಕೂ ಆತ ಹೇಳಿದ ಶಾಕಿಂಗ್ ವಿಷಯವಾದರೂ ಏನು..? ಪೊಲೀಸರು ಅಲ್ಲಿ ದಂಗಾಗಿದ್ದು ಯಾಕೆ ಅಂತಾ ತೋರಿಸ್ತಿವಿ ನೋಡಿ.

ಸಿಎಂ ಬಸವರಾಜ ಬೊಮ್ಮಾಯಿ ಸ್ವ ಕ್ಷೇತ್ರದ ಶಿಗ್ಗಾಂವಿ ರಾಜಶ್ರೀ ಚಿತ್ರಮಂದಿರದಲ್ಲಿ ನಡೆದ ಶೂಟೌಟ್ ಪ್ರಕರಣ ಮಾಸುವ ಮುನ್ನವೆ ಶಿಗ್ಗಾಂವಿ ತಾಲೂಕಿನ ಹುಲಗೂರಿನಲ್ಲಿ ಮನೆಯ ಕಟ್ಟೆ ಮೇಲೆ ಕುಳಿತಿದ್ದ ಮಹಿಳೆ ಮೇಲೆ ಆಗಂತುಕರು ಬೈಕ್ ಮೇಲೆ ಬಂದು, ಬಂದೂಕಿನಿಂದ ಪೈರಿಂಗ್ ಮಾಡಿದ್ದರು. ಸೂರ್ಯ ಮುಳುಗುತ್ತಿದ್ದಂತೆ ಮಹಿಳೆ ಮೇಲೆ ನಡೆದ ಈ ಗುಂಡಿನ ದಾಳಿ ಜಿಲ್ಲೆಯ ಜನರನ್ನು ಬೆಚ್ಚಿಬಿಳಿಸಿತ್ತು. ಗಂಡ ಹೆಂಡತಿ ಜಗಳವೆ ಗುಂಡಿನ‌ ದಾಳಿಗೆ ಕಾರಣ ಅಂತ ಶಂಕೆ ವ್ಯಕ್ತವಾಗಿತ್ತು. ಆದರೆ ಆರೋಪಿಗಳ ಪತ್ತೆಗಾಗಿ ಹಾವೇರಿ ಪೊಲೀಸರು ಜಾಲಬೀಸಿದ್ದರು.

ಈ ನಡುವೆ ಉತ್ತರ ಕನ್ನಡ ಜಿಲ್ಲೆಯ ಪೊಲೀಸರು ಅಲರ್ಟ್ ಆಗಿದ್ದು, ಅಕ್ರಮವಾಗಿ ಬಂದೂಕು ಹೊಂದಿರುವವರನ್ನು ಹಡೆಮುರಿ ಕಟ್ಟುವುದಕ್ಕೆ ಅಲ್ಲಿಯ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಪನ್ನೇಕರ್ ವಿಶೇಷ ತಂಡ ರಚಿಸಿದ್ದರು. ಖಚಿತ ಮಾಹಿತಿ ಪಡೆದ ಈ ತಂಡ ಮುಂಡಗೋಡ ತಾಲೂಕಿನ ಇಂದೂರ ಗ್ರಾಮದ ದಾವಲ್ ಸೈಯದಲಿ ಮನೆ ಮೇಲೆ ದಾಳಿ ನಡೆಸಿದ್ದು, ದಾಳಿ ವೇಳೆ ಮನೆಯಲ್ಲಿದ್ದ ಪರವಾನಗಿ ಇಲ್ಲದ ನಾಡ ಬಂದೂಕು ಹಾಗೂ ದಾವಲ್ ಸೈಯದ್ ಅಲಿಯನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸಿದರು. ತನ್ನ ಬಳಿಯಿದ್ದ ನಾಡಬಂದೂಕಿನ ಕಹಾನಿ ಹೇಳಲು ಸುರುಮಾಡಿದ್ದ ದಾವಲ್ ಸೈಯದಲಿ ಪೊಲೀಸರಿಗೆ ಒಂದು ಶಾಕಿಂಗ್ ವಿಷಯ ಹೇಳಿದ್ದ. ಇತ್ತಿಚಿಗೆ ಶಿಗ್ಗಾಂವ್ ತಾಲೂಕಿನ ಹುಲಗೂರಿನಲ್ಲಿ ಮಹಿಳೆ ಮೇಲೆ ನಡೆದ ಗುಂಡಿನ ದಾಳಿಯ ರಹಸ್ಯ ಬಾಯ್ಬಿಟ್ಟಿದ್ದು ಕೇಳಿ ಪೋಲಿಸರು ಕಕ್ಕಾಬಿಕ್ಕಿಯಾಗಿದ್ರು.

ಶಿಗ್ಗಾಂವಿ ತಾಲೂಕಿನ ಹುಲಗೂರಿನ ಸಲ್ಮಾಬಾನು ಮತ್ತು ಹುಬ್ಬಳ್ಳಿಯ ಅರಳಿಕಟ್ಟಿಯ ಅಬ್ದುಲ್ ಖಾದರ್ ಮದ್ವೆಯಾಗಿ 12 ವರ್ಷ ಆಗಿತ್ತು. ಗಂಡನ ವಿರುದ್ಧ ಹುಬ್ಬಳ್ಳಿ ಪೊಲೀಸರಿಗೆ ಸಲ್ಮಾಬಾನು ದೂರು ನೀಡಿದ್ದಳು. ಬಳಿಕ ತವರು ಮನೆ ಸೇರಿಕೊಂಡಿದ್ದ ಸಲ್ಮಾಬಾನು ಕೊಲೆಗೆ ಗಂಡ ಸ್ಕೇಚ್ ಹಾಕಿದ್ದ.

ತನ್ನ ಸಂಬಂಧಿ ದಾವಲ್ ಸೈಯದಲಿ ಮತ್ತು ಮೌಲಾಲಿ ಬೆಂಡಿಗೇರಿಗೆ ಪತ್ನಿಯ ಕೊಲೆ ಮಾಡುವಂತೆ 2 ಲಕ್ಷ ರೂಪಾಯಿಗೆ ಸುಪಾರಿ ನೀಡಿದ್ದ. ಸುಪಾರಿ ಪಡೆದಿದ್ದ ಹಂತಕರು ಮೇ 24 ರಂದು ಸಾಯಂಕಾಲ ಐದಾರು ಬಾರಿ ಸಲ್ಮಾಬಾನು ಮನೆ ಮುಂದೆ ಸುತ್ತಾಡಿದ್ದಾರೆ. ಕರೆಂಟ್ ಹೊಗ್ತಾ ಇದ್ದಂತೆ ಮುಸುಕು ಕಟ್ಟಿಕೊಂಡು ಬೈಕ್ ನಲ್ಲಿ ಬಂದ ಹಂತಕರು ಮಹಿಳೆ ಮೇಲೆ ಪೈರಿಂಗ್ ಮಾಡಿದ್ದಾರೆ. ಬೈಕ್ ಹಿಂದೆ ಕುಳಿತಿದ್ದ ದಾವಲ್ ಸೈಯದಲಿ ಗುಂಡು ಹಾರಿಸಿದ್ರು ಸಲ್ಮಾಬಾನು ಬಚಾವಾಗಿದ್ದಳು.

ಅಕ್ರಮ ಬಂದೂಕಿನ ಹಿಂದೆ ಬಿದ್ದಿದ್ದ ಪೊಲೀಸರಿಗೆ ಸಿಕ್ಕ ಮಾಹಿತಿಯೆ ರೋಚಕವಾಗಿತ್ತು. ಆ ಬಂದುಕಿನ ಕಹಾನಿಯಿಂದ ಮಹಿಳೆ ಮೆದಲೆ ಪೈರಿಂಗ್ ಮಾಡಿದವರು ಈಗ ಅಂದರ್ ಆಗಿದ್ದಾರೆ. ಪತ್ನಿ ಕೊಂದು ಮತ್ತೊಂದು ಮದ್ವೆಯಾಗುವ ಖುಷಿಯಲ್ಲಿದ್ದ ಗಂಡ ಜೈಲು ಸೇರಿದ್ದಾನೆ.

Edited By : Shivu K
PublicNext

PublicNext

04/06/2022 09:22 pm

Cinque Terre

65.04 K

Cinque Terre

4

ಸಂಬಂಧಿತ ಸುದ್ದಿ