ಚಿಕ್ಕೋಡಿ: ಮದುವೆ ಆಗಲಿಲ್ಲ ಎಂದು ಖಿನ್ನತೆಗೆ ಒಳಗಾದ ಯುವಕ ನೇಣಿಗೆ ಶರಣಾದ ಘಟನೆ ಹುಕ್ಕೇರಿ ತಾಲೂಕಿನ ಕರಗುಪ್ಪಿ-ಯಲ್ಲಾಪೂರ ಗ್ರಾಮದಲ್ಲಿ ನಡೆದಿದೆ.
ಹೌದು ಮದುವೆ ಮಾಡಿಕೊಳ್ಳಲು ಹೆಣ್ಣು ಸಿಗದೇ ಇರುವ ಕಾರಣಕ್ಕೆ ರಮೇಶ್ ಬಾಳಪ್ಪ ಪಾಟೀಲ್ (25) ಮೃತ ದುರ್ದೈವಿ.
ಇಬ್ಬರು ಸಹೋದರರು ಹಾಗೂ ಮೃತ ರಮೇಶಗೆ ಹಲವು ವರ್ಷಗಳಿಂದ ಕನ್ಯೆಯನ್ನು ಹುಡುಕುತ್ತಿದ್ದರು. ಇದೇ ಕಾರಣದಿಂದಾಗಿ ಬೇಸತ್ತು, ನೇಣು ಬಿಗಿದು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸದ್ಯ ಯಮಕಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
PublicNext
02/06/2022 06:38 pm