ಜಲೋರ್: ಪೋಟೋದಲ್ಲಿ ನೋಡಿದ ಹುಡುಗಿನೇ ಬೇರೆ. ಮದುವೆ ಆದ ಹುಡುಗಿನೇ ಬೇರೆ. ಮೋಸ ಹೋದ ವರ ಈಗ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದಾನೆ.
ರಾಜಸ್ಥಾನದ ಜಲೋರ್ ನಲ್ಲಿ ಈ ಒಂದು ಘಟನೆ ನಡೆದಿದೆ. ಸೋಹನ್ ಸಿಂಗ್ ಎಂಬ ಯುವಕನೇ ಈಗ ಮೋಸ ಮೋದ ವರ. ಮೋಸ ಮಾಡಿದವನ ಹೆಸರು ಗಣಪತ್ ಸಿಂಗ್. ಸೋಹನ್ ಸಿಂಗ್ ಹೆಣ್ಣು ನೋಡಲು ಬಂದಾಗ, ಸುಂದರ ಹುಡುಗಿಯ ಫೋಟೋ ತೋರಿಸಿದ್ದಾರೆ.
ಈಕೆಯ ಜೊತೆಗೆ ಮದುವೆ ಆಗಬೇಕು ಅಂದ್ರೆ, ನೀನು 5 ಲಕ್ಷ ವಧು ದಕ್ಷಿಣೆ ಕೊಡಬೇಕು ಅಂತಲೂ ಹೇಳಿದ್ದಾನೆ. ಅದಕ್ಕೊಪ್ಪಿದ ಸೋಹನ್ ಸಿಂಗ್ ಫ್ಯಾಮಿಲಿಯವರು ದುಡ್ಡು ಕೊಟ್ಟು ಮದುವೆನೂ ಮಾಡಿದ್ದಾರೆ.
ಆದರೆ,ವರ ಸೋಹನ್ ಸಿಂಗ್ ಮದುವೆ ಆದ ಬಳಿಕವೇ ಹುಡುಗಿಯ ಗೂಂಗಟ್ ತೆಗೆದಿದ್ದಾನೆ. ಆಗಲೇ ಈತನಿಗೆ ಸತ್ಯದ ದರ್ಶನ ಆಗಿದೆ. ಫೋಟೋದಲ್ಲಿ ನೋಡಿದ ಹುಡುಗಿನೇ ಬೇರೆ. ಇಲ್ಲಿರೋ ಹುಡುಗಿನೇ ಬೇರೆ. ಅದಕ್ಕೇನೆ ನ್ಯಾಯ ಕೊಡಿಸಿದ ಅಂತಲೇ ಈಗ ಸೋಹನ್ ಫ್ಯಾಮಿಲಿ ಹುಡುಗಿ ಮನೆಯವರ ವಿರುದ್ಧ ಮೋಸ ಮಾಡಿರೋ ಕೇಸ್ ದಾಖಲಿಸಿದ್ದಾರೆ.
PublicNext
01/06/2022 07:30 pm