ಹಾವೇರಿ: ಹಾವೇರಿ ಜಿಲ್ಲೆಯ ಶಿಗ್ಗಾಂವಿಯ ಚಿತ್ರಮಂದಿರದಲ್ಲಿ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪ್ರಕರಣ ಸಂಬಂಧ ಪೊಲೀಸರು ಬಿಹಾರದ ಮೂಲದ ಮೂವರನ್ನು ಬಂಧಿಸಿದ್ದಾರೆ.
ಶಿಗ್ಗಾಂವಿಯ ಥಿಯೇಟರ್ ಒಂದರಲ್ಲಿ ಏಪ್ರಿಲ್ 19 ರಂದು ಕೆಜಿಎಫ್-2 ಚಿತ್ರ ವೀಕ್ಷಣೆ ವೇಳೆ ವಸಂತ್‌ಕುಮಾರ್ ಮುಗಳಿ ಎಂಬ ಯುವಕನ ಮೇಲೆ ಗುಂಡಿನ ದಾಳಿ ನಡೆದಿತ್ತು. ಪ್ರಕರಣ ಸಂಬಂಧ ಈಗಾಗಲೇ ಪ್ರಕರಣದ ಪ್ರಮುಖ ಆರೋಪಿ ಮಂಜುನಾಥ್ ಅಲಿಯಾಸ್ ಮಲ್ಲಿಕ್ ಪಾಟೀಲ್ ಎಂಬಾತನ್ನು ಬಂಧಿಸಿದ್ದಾರೆ. ಇದೀಗ ಮಲ್ಲಿಕ್ ಪಾಟೀಲ್‌ಗೆ ಪಿಸ್ತೂಲ್, ಗುಂಡು ತಯಾರಿಸಿಕೊಟ್ಟಿದ್ದ ಬಿಹಾರ ಮೂಲದ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಿಹಾರದ ಮುಂಗೇರ್ ಜಿಲ್ಲೆಯ ಮಿರ್ಜಾಪುರದ ಬರದಾದಲ್ಲಿ ಪೊಲೀಸರು ಮೊಹಮ್ಮದ್ ಸಮ್ಸದ್, ಮೊಹಮ್ಮದ್ ಅಲಾಮ್, ಮೊಹಮ್ಮದ್ ಸಾಹೀದ್ ಚಾಂದ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಿಗ್ಗಾಂವಿ ಪೊಲೀಸ್ ಠಾಣೆಯ ಸಿಪಿಐ ಬಸವರಾಜ ತಂಡದಿಂದ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.
PublicNext
31/05/2022 12:18 pm