ಬೆಂಗಳೂರು: ಪಿಎಸ್ಐ ಅಕ್ರಮ ಪ್ರಕರಣದಲ್ಲಿ ಬಂಧಿತನಾಗಿರುವ ಹೆಡ್ ಕಾನ್ಸ್‌ಟೇಬಲ್ ಶ್ರೀಧರ್ ಕಡೆಯಿಂದ ಮತ್ತೆ 50 ಲಕ್ಷ ರೂ. ಸೀಜ್ ಆಗಿದೆ. ಈ ಮೂಲಕ ಸಿಐಡಿ ಒಟ್ಟು 2.20 ಕೋಟಿ ರೂಪಾಯಿ ಜಪ್ತಿ ಮಾಡಿಕೊಂಡಿದೆ.
ಕಳೆದ ಮಂಗಳವಾರ ಸಿಐಡಿ ಅಧಿಕಾರಿಗಳು ಶ್ರೀಧರ್ ಮನೆಯಲ್ಲಿ 1.5 ಕೋಟಿ ರೂ. ಜಪ್ತಿ ಮಾಡಿಕೊಂಡಿತ್ತು. ಇದಾದ ನಂತರ ಶ್ರೀಧರ್ ಸ್ನೇಹಿತನೊಬ್ಬ ಸಿಐಡಿಗೆ ಹಾಜರಾಗಿ 50 ಲಕ್ಷ ರೂ. ಕೊಟ್ಟಿದ್ದಾನೆ ಎನ್ನಲಾಗಿದೆ. ಶ್ರೀಧರ ಒಂದಷ್ಟು ಹಣವನ್ನು ತನ್ನ ಸ್ನೇಹಿತರಿಗೆ ಕೊಟ್ಟಿದ್ದ ಎಂದು ಹೇಳಲಾಗುತ್ತಿದೆ.
PublicNext
20/05/2022 02:55 pm