ದೊಡ್ಡಬಳ್ಳಾಪುರ: ಪ್ರಿಯಕರನೋರ್ವ ಗೃಹಿಣಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ವಡಗೆರೆ ಗ್ರಾಮದಲ್ಲಿ ನಡೆದಿದೆ.
ಭಾಗ್ಯಶ್ರೀ(35) ಕೊಲೆಯಾದ ದುರ್ದೈವಿ. ಪ್ರಿಯಕರ ರಿಯಾಜ್(27) ಕೊಲೆಗೈದ ಆರೋಪಿ. ಭಾಗ್ಯಶ್ರೀಯು ರಿಯಾಜ್ ಜತೆ ನಿರಂತರ ಸಂಬಂಧ ಇಟ್ಡುಕೊಂಡಿದ್ದಳು ಎನ್ನಲಾಗಿದೆ. ಆದರೆ ಕೆಲ ದಿನಗಳಿಂದ ಪ್ರಿಯಕರನ್ನು ಕೇರ್ ಮಾಡದೇ ಇರೋ ಕಾರಣಕ್ಕೆ ಆ ಕಿರಾತಕ ರಿಯಾಜ್ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ಸದ್ಯ ಸ್ಥಳಕ್ಕೆ ದೊಡ್ಡಬೆಳವಂಗಲ ಪೊಲೀಸರ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಪ್ರಿಯಕರ ರಿಯಾಜ್‌ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
PublicNext
15/05/2022 04:14 pm