ಬೆಂಗಳೂರು : 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣ ಸಂಬಂಧ ಅಕ್ರಮ ತಡೆಯುವಲ್ಲಿ ವಿಫಲರಾದ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಕಲಬುರಗಿ ಮಹಿಳಾ ಠಾಣೆಯ ಇನ್ಸೆಪೆಕ್ಟರ್ ದಿಲೀಪ್ ಸಾಗರ್ ಮತ್ತು ಬೆರಳಚ್ಟು ವಿಭಾಗದ ಡಿವೈಎಸ್‌ಪಿ ಆರ್.ಆರ್ ಹೊಸಮನಿ ಅಮಾನತು ಮಾಡಲಾಗಿದ್ದು, ಇಂದು ವಿಚಾರಣೆ ನಡೆಯುವ ಸಾಧ್ಯತೆ ಇದೆ. ಈ ಇಬ್ಬರು ಅಧಿಕಾರಿಗಳು ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಉಸ್ತುವಾರಿಯಾಗಿದ್ದರು. ಉತ್ತರ ಪತ್ರಿಕೆ ಅರ್ಧಗಂಟೆ ತಡವಾಗಿ ತಲುಪಿಸಿದ್ದರು ಎನ್ನಲಾಗಿದೆ.
ಕಲಬುರಗಿಯ ಜ್ಞಾನಜ್ಯೋತಿ ಶಾಲೆಯಲ್ಲಿ ಪಿಎಸ್ಐ ಪರೀಕ್ಷೆ ವೇಳೆ ನಿಯಮ ಉಲ್ಲಂಘನೆ ಮಾಡಿದ್ದಾರೆ. ಈ ನಿಯಮ ಉಲ್ಲಂಘನೆಯಿಂದಲೇ ಪರೀಕ್ಷೆ ಕೇಂದ್ರದಲ್ಲಿ ಅಕ್ರಮ ನಡೆದಿದೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಸಿಬಿಐ ದಿಲೀಪ್ ಸಾಗರ್ ಹಾಗೂ ಆರ್.ಆರ್ ಹೊಸಮನಿ ಅಮಾನತು ಮಾಡಲಾಗಿದೆ.
PublicNext
05/05/2022 10:48 am