ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗೋಹತ್ಯೆ ಆರೋಪ: ಬುಡಕಟ್ಟು ಸಮುದಾಯದ ಇಬ್ಬರ ಕೊಲೆ

ಸಿವನಿ: ಗೋಹತ್ಯೆ ಮಾಡಿದ್ದಾರೆಂಬ ಆರೋಪ ಕೇಳಿಬಂದ ಹಿನ್ನೆಲೆ ಬುಡಕಟ್ಟು ಸಮುದಾಯದ ಇಬ್ಬರನ್ನು ಗುಂಪು ಹಲ್ಲೆ ಮಾಡಿ ಕೊಲೆಗೈಯಲಾಗಿದೆ. ಪ್ರಕರಣದಲ್ಲಿ ಇನ್ನೋರ್ವ ಗಾಯಗೊಂಡಿದ್ದಾನೆ.

ಸೋಮವಾರ ಈ ಘಟನೆ ನಡೆದಿದೆ ಎನ್ನಲಾಗಿದೆ. 15ರಿಂದ 20 ಜನರಿದ್ದ ಗುಂಪು ಬುಡಕಟ್ಟು ವ್ಯಕ್ತಿಗಳ ಮನೆಗೆ ತೆರಳಿ ಭೀಕರ ಹಲ್ಲೆ ನಡೆಸಿದೆ. ಹಲ್ಲೆಗೊಳಗಾದವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟಿದ್ದಾರೆ. ಇನ್ನೊಬ್ಬ ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಅಧಿಕಾರಿ ಎಸ್.ಕೆ ಮರವಿ ತಿಳಿಸಿದ್ದಾರೆ.

ಕೃತ್ಯದಲ್ಲಿ ಭಾಗಿಯಾದ ಮೂವರು ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಮೃತರ ಮನೆಯಲ್ಲಿ 12 ಕೆ.ಜಿ ಮಾಂಸ ಪತ್ತೆಯಾಗಿದೆ ಎನ್ನಲಾಗಿದೆ.

ಇದು ಬಜರಂಗ ದಳ ಕಾರ್ಯಕರ್ತರು ನಡೆಸಿದ ಗುಂಪು ಹಲ್ಲೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.

Edited By : Nagaraj Tulugeri
PublicNext

PublicNext

04/05/2022 12:12 pm

Cinque Terre

43.16 K

Cinque Terre

7

ಸಂಬಂಧಿತ ಸುದ್ದಿ