ಚೆನ್ನೈ: ಪೊಲೀಸ್ ಕಸ್ಟಡಿಯಲ್ಲಿದ್ದ ವಿಘ್ನೇಶ್ ಎಂಬ ಚೆನ್ನೈ ಯುವಕ ಸಾವನೊಪ್ಪಿದ್ದಾನೆ. ಈ ಅನುಮಾನಾಸ್ಪದ ಸಾವಿನ ಮತ್ತೊಂದು ಸದ್ಯವನ್ನ ಬಿಚ್ಚಿಡುತ್ತಿದೆ ಸಿಸಿ ಟಿವಿಯ ಈ ಒಂದು ದೃಶ್ಯ. ಬನ್ನಿ, ನೋಡೋಣ.
ವಿಘ್ನೇಶ್ ಮತ್ತು ಆತನ ಸ್ನೇಹಿತ ಸುರೇಶ್ ನನ್ನ ಪೊಲೀಸರು ಬಂಧಿಸಿದ್ದರು. ಆದರೆ, ವಿಘ್ನೇಶ್ ಪೊಲೀಸ್ ಕಸ್ಟಡಿಯಲ್ಲಿ ಇರೋವಾಗಲೇ ಏಪ್ರಿಲ್-19 ರಂದು ಅನುಮಾನಾಸ್ಪದವಾಸಗಿಯೇ ಮೃತಪಟ್ಟಿದ್ದಾನೆ.
ಈ ವಿಚಾರವಾಗಿ ಪೊಲೀಸರು ಬೇರೆ ಕಥೆಯನ್ನೇ ಹೇಳಿದ್ದರು. ವಿಘ್ನೇಶ್ ಮತ್ತು ಸುರೇಶ್ ಕಿತ್ತಾಡಿಕೊಂಡಿದ್ದರು. ಇವರನ್ನ ಬಿಡಿಸಲು ಹೋದಾಗ ಪೊಲೀಸರಿಗೆ ವಿಘ್ನೇಶ್ ಚೂರಿಯಿಂದ ತಿವಿಯಲು ಬಂದಿದ್ದ ಅಂತಲೂ ಪೊಲೀಸರು ಹೇಳಿದ್ದರು. ವಿಘ್ನೇಶ್ ಉಪಹಾರ ಸೇವಿಸೋವಾಗ ಮೂರ್ಚೆ ರೋಗಕ್ಕೆ ಒಳಗಾಗಿದ್ದ, ಆ ಕೂಡಲೇ ಆತನನ್ನ ಆಸ್ಪತ್ರೆಗೂ ದಾಖಲಿಸಿದೇವು. ಆದರೆ, ಆತ ಉಳಿಯಲಿಲ್ಲ ಅಂತಲೇ ಪೊಲೀಸರು ತಿಳಿಸಿದ್ದರು.
ವಿಘ್ನೇಶ್ ಪೋಷಕರು ನೇರಾ ನೇರವಾಗಿಯೇ ಪೊಲೀಸರನ್ನ ದೂರಿದ್ದಾರೆ. ಪೊಲೀಸರ ಕೊಟ್ಟ ಟಾರ್ಚರ್‌ಗೆ ನಮ್ಮ ವಿಘ್ನೇಶ್ ಸತ್ತು ಹೋಗಿದ್ದಾನೆ ಎಂದು ದೂರಿದ್ದಾರೆ. ಈ ವಿಷಯ ಯಾರಿಗೂ ಹೇಳದೇ ಇರೋವಂತೆ ಒಂದು ಲಕ್ಷ ರೂಪಾಯಿ ಆಮಿಷವೊಡ್ಡಿದ್ದರು ಎಂದು ಮೃತ ವಿಘ್ನೇಶ್ ಸಹೋದರ ವಿನೋದ್ ಹೇಳಿಕೆ ಕೊಟ್ಟಿದ್ದಾನೆ.
PublicNext
03/05/2022 01:58 pm