ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಡ್ಡಿ ದಂಧೆಕೋರರ ಅಟ್ಟಹಾಸಕ್ಕೆ ಯುವಕ ಬಲಿ

ಗದಗ : ಬಡ್ಡಿ ವ್ಯವಹಾರದ ವಿಚಾರವಾಗಿ ಯುವಕನೊರ್ವನಿಗೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಪರಿಣಾಮ ಹಲ್ಲೆಗೆ ಒಳಗಾಗಿದ್ದ ಯುವಕ ಸಾವನ್ನಪ್ಪಿದ್ದಾನೆ. ಗದಗ ನಗರದ ಬೆಟಗೇರಿಯಲ್ಲಿ ಈ ಘಟನೆ ನಡೆದಿದ್ದು ಮೃತ್ಯುಂಜಯ ಭರಮಗೌಡರ್ (26) ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಯುವಕನಾಗಿದ್ದಾನೆ.

ಮಾರ್ಚ್ 23 ರಂದು ಬಡ್ಡಿ ಹಣಕ್ಕಾಗಿ ಯುವಕನನ್ನು ಹಿಗ್ಗಾಮುಗ್ಗಾ ಥಳಿಸಿದ್ದ ರೌಡಿ ಶೀಟರ್ ಮತ್ತು ಗ್ಯಾಂಗ್ ಮೂರು ದಿನ ಕೂಡಿ ಹಾಕಿ ಚಿತ್ರಹಿಂಸೆ ನೀಡಿದ್ದರು. ಬಳಿಕ ಯುವಕನ ಚಿಕಿತ್ಸೆ ಫಲಿಸದೇ ಯುವಕ ಸಾವನ್ನಪ್ಪಿದ್ದಾನೆ. ಇನ್ನು ದಂಧೆಕೋರರು 2 ಲಕ್ಷ ಸಾಲಕ್ಕೆ ಒಂದು ಲಕ್ಷ ಬಡ್ಡಿ ಹಣಕ್ಕೆ ಒತ್ತಾಯಿಸಿ ಬಳಿಕ ಜಮೀನಿಗೆ ಕರೆದ್ಯೊಯ್ದು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ರೌಡಿ ಶೀಟರ್ ಉಮೇಶ್ ಸುಂಕದ, ಉದಯ ಸುಂಕದ ಮತ್ತು ಇನ್ನೊಬ್ಬ ಸೇರಿ ಹಲ್ಲೆ ಮಾಡಿದ್ದಾರೆ.ಮಾಧ್ಯಮದಲ್ಲಿ ಸುದ್ದಿ ಪ್ರಸಾರ ಬಳಿಕ ಉಮೇಶ್ ಸುಂಕದ ಸೇರಿದಂತೆ ಮೂವರ ಬಂಧನವಾಗಿದೆ. ಇನ್ನು ಬೆಟಗೇರಿ ಭಾಗದಲ್ಲಿ ವ್ಯಾಪಕ ಬಡ್ಡಿ ವ್ಯವಹಾರ ಆರೋಪ ಕೂಡಾ ಕೇಳಿ ಬಂದಿದೆ.

Edited By : Nirmala Aralikatti
PublicNext

PublicNext

23/04/2022 03:27 pm

Cinque Terre

31.41 K

Cinque Terre

2