ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

8 ತಿಂಗಳಿಂದ ಬಾಲಕಿ ಮೇಲೆ ಅತ್ಯಾಚಾರವೆಸಗಿದ 80 ದುರುಳರು

ಹೈದರಾಬಾದ್ : ಅತ್ಯಾಚಾರ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಸದ್ಯ 13 ವರ್ಷದ ಬಾಲಕಿಯ ಮೇಲೆ 80 ಮಂದಿ ಕಾಮುಕರು ಸತತ 8 ತಿಂಗಳಿನಿಂದ ಅತ್ಯಾಚಾರ ಎಸಗಿರುವ ಘಟನೆ ಆಂಧ್ರಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಗುಂಟೂರಿನ ಪೊಲೀಸರು ಬಾಲಕಿಯನ್ನು ರಕ್ಷಿಸಿದ್ದು, ವಿಜಯವಾಡ, ಹೈದರಾಬಾದ್, ಕಾಕಿನಾಡ ಮತ್ತು ನೆಲ್ಲೂರು ಸೇರಿದಂತೆ ವಿವಿಧೆಡೆಯಲ್ಲಿ ಕಾಮುಕರನ್ನು ಬಂಧಿಸಲಾಗಿದೆ.

ಏನಿದು ಘಟನೆ?: ಜೂನ್ 2021ರಲ್ಲಿ ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಆಸ್ಪತ್ರೆಯಲ್ಲಿ ಬಾಲಕಿಯ ತಾಯಿಯೊಂದಿಗೆ ಸ್ನೇಹ ಬೆಳೆಸಿದ ಸವರ್ಣ ಕುಮಾರಿ ಎಂಬ ಮಹಿಳೆ ಆ ಬಾಲಕಿಯನ್ನು ದತ್ತು ಪಡೆದಿದ್ದಳು. ಹುಡುಗಿಯ ತಾಯಿ ಕೋವಿಡ್-19ನಿಂದ ಮೃತಪಟ್ಟನಂತರ ಆಕೆಯ ತಂದೆಗೆ ವಿಷಯ ತಿಳಿಸದೇ ಸ್ವರ್ಣಕುಮಾರಿಯೇ ಬಾಲಕಿಯನ್ನು ಕರೆದುಕೊಂಡು ಹೋಗಿದ್ದರು.

ಆಗಸ್ಟ್ 2021ರಲ್ಲಿ ಹುಡುಗಿಯ ತಂದೆ ಪೊಲೀಸರನ್ನು ಸಂಪರ್ಕಿಸಿ ತಮ್ಮ ಮಗಳು ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದರು. ತನಿಖೆ ವೇಳೆ ಬಾಲಕಿ ಕಳೆದ 8 ತಿಂಗಳಿನಿಂದ ವೇಶ್ಯಾವಾಟಿಕೆಗೆ ಬಳಸಿಕೊಳ್ಳಲು ಆಂಧ್ರಪ್ರದೇಶ ಮತ್ತು ತೆಲಂಗಾಣದ ವಿವಿಧ ವೇಶ್ಯಾಗೃಹಗಳಿಗೆ ಕಳುಹಿಸಲಾಗಿತ್ತು. ಎಂದು ಹೇಳಿಕೊಂಡಿದ್ದಾರೆ.ಪೊಲೀಸರು 80 ಆರೋಪಿಗಳನ್ನು ಗುರುತಿಸಿದ್ದು, ಅವರನ್ನು ಬಂಧಿಸಲು ಪ್ರಾರಂಭಿಸಿದ್ದಾರೆ.

Edited By : Nirmala Aralikatti
PublicNext

PublicNext

21/04/2022 09:03 pm

Cinque Terre

47.27 K

Cinque Terre

12