ಪಾಟ್ನಾ: ಬಿಹಾರದ ಗೋಪಾಲ್‌ಗಂಜ್‌ನಲ್ಲಿ ಮಹಿಳಾ ಡಾನ್ಸರ್ ಜೊತೆಗೆ ಕುಣಿಯುತ್ತಿದ್ದ ಯುವಕನೋರ್ವ ಕೈಯಲ್ಲಿ ಬಂದೂಕು ಹಿಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆ ಯುವಕ ಡ್ಯಾನ್ಸರ್‌ನತ್ತ ಬಂದೂಕನ್ನು ತೋರಿಸುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಈ ವಿಡಿಯೋ ಕುರಿತು ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಐಎಎಸ್ ಅಧಿಕಾರಿ ಸಂಜಯ್ ಕುಮಾರ್, "ಇದು ನನ್ನನ್ನು ಮೂಕನನ್ನಾಗಿಸುತ್ತದೆ. ಈ ಘಟನೆ ಸಾಂಸ್ಕೃತಿಕ ಅಧಃಪತನದ ಮಟ್ಟವನ್ನು ತೋರುತ್ತಿದೆ" ಎಂದು ಅಸಮಾಧಾನ ಹೊರ ಹಾಕಿದ್ದಾರೆ.
PublicNext
20/04/2022 06:07 pm