ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರೀತಿ ವಿಚಾರವಾಗಿ ಯುವತಿ ಪೋಷಕರಿಂದ ಹಲ್ಲೆ ಆರೋಪ: ಯುವಕ ಆತ್ಮಹತ್ಯೆ

ದಾವಣಗೆರೆ: ಪ್ರೀತಿಯ ಕಾರಣಕ್ಕೆ ಯುವತಿಯ ಪೋಷಕರು ಬೆದರಿಕೆ ಹಾಕಿದ್ದಕ್ಕೆ ಮನನೊಂದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನ್ಯಾಮತಿ ತಾಲೂಕಿನ ಕೆಂಚಿಕೊಪ್ಪ ಗ್ರಾಮದಲ್ಲಿ ನಡೆದಿದೆ.

ಕೆಂಚಿಕೊಪ್ಪ ಗ್ರಾಮದ ಯುವಕ ಬಿ.ಕೆ. ರಾಕೇಶ (25) ದನದ ಕೊಟ್ಟಿಗೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಬಿ.ಕೆ. ರಾಕೇಶ ಪಕ್ಕದ ಜೀನಹಳ್ಳಿ ಗ್ರಾಮದ ಯುವತಿಯೊಬ್ಬರನ್ನು ಪ್ರೀತಿಸುತ್ತಿದ್ದು, ಈ ಸಂಬಂಧ ಯುವತಿ ಮನೆಯವರು ತಮ್ಮ ಮಗಳನ್ನು ಪ್ರೀತಿಸದಂತೆ ರಾಕೇಶಗೆ ಎಚ್ಚರಿಕೆ ನೀಡಿದ್ದರು. ಇದರಿಂದ ರಾಕೇಶ ಯುವತಿಯಿಂದ ದೂರವಿದ್ದರು.

‘ಯುವತಿಯು ನಮ್ಮ ಮಗನಿಗೆ ಪ್ರೀತಿಸುವಂತೆ ಒತ್ತಡ ಹಾಕಿದ್ದು, ನಿಮ್ಮ ಮನೆಯ ಹಿರಿಯರನ್ನು ಒಪ್ಪಿಸು ನಂತರ ನೋಡೋಣ ಎಂದು ನನ್ನ ಮಗ ತಿಳಿಸಿದ್ದಾನೆ. ಯುವತಿ ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿದ್ದು, ರಾಕೇಶನನ್ನು ಬೆಂಗಳೂರಿಗೆ ಕರೆಸಿಕೊಂಡು, ಅಲ್ಲಿಂದ ಹೊನ್ನಾಳಿ ತನಕ ಜೊತೆಯಾಗಿ ಬಂದಿದ್ದಾರೆ’ ಎಂದು ರಾಕೇಶ ಅವರ ತಂದೆ ಕೋಮೇಶ್ವರಪ್ಪ ದೂರಿನಲ್ಲಿ ತಿಳಿಸಿದ್ದಾರೆ.

‘ಜೊತೆಯಾಗಿ ಬಂದಿರುವುದಕ್ಕೆ ಕುಪಿತಗೊಂಡ ಯುವತಿಯ ಕುಟುಂಬದವರು ರಾಕೇಶನ ಮೇಲೆ ಹಲ್ಲೆ ಮಾಡಿ, ನಮ್ಮ ಮಗಳ ತಂಟೆಗೆ ಬರಬೇಡ ಎಂದು ಬೆದರಿಕೆ ಹಾಕಿದ್ದಾರೆ. ಅಲ್ಲದೇ ಯುವತಿ ರಾಕೇಶನ ತಾಯಿಗೆ ಮೊಬೈಲ್‌ ಕರೆ ಮಾಡಿ ನಿನ್ನ ಮಗ ಸ್ವಲ್ಪ ಹೊತ್ತಿನಲ್ಲಿ ಸಾಯುತ್ತಾನೆ ಕಾಪಾಡಿಕೋ ಎಂದು ತಿಳಿಸಿದ್ದಾರೆ. ನನ್ನ ಮಗ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದನೆ ನೀಡಿದ ಯುವತಿ ಸೇರಿ ರಾಮಚಂದ್ರಪ್ಪ, ಷಣ್ಮುಖಪ್ಪ, ಸನ್ಯಾಸಿ ಗದ್ದಿಗೆಪ್ಪ, ಎಸ್. ಮಂಜಪ್ಪ ಎಂಬುವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಕೋಮೇಶ್ವರಪ್ಪ ನ್ಯಾಮತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Edited By : Nagaraj Tulugeri
PublicNext

PublicNext

18/04/2022 03:04 pm

Cinque Terre

50.32 K

Cinque Terre

0

ಸಂಬಂಧಿತ ಸುದ್ದಿ