ಗದಗ: ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತನನ್ನು ಬರ್ಬರವಾಗಿ ಕೊಲೆಗೈದ ಆಘಾತಕಾರಿ ಘಟನೆ ಗದಗದಲ್ಲಿ ನಡೆದಿದೆ.
ಗಜೇಂದ್ರಸಿಂಗ್ ಕೊಲೆಯಾದ ಕಾಂಗ್ರೆಸ್ ಕಾರ್ಯಕರ್ತ. ಗದಗ-ಬೆಟಗೇರಿಯ ಮಂಜುನಾಥ ನಗರದಲ್ಲಿ ಇಂದು ಸಂಜೆ ಕೊಲೆ ನಡೆದಿದೆ. ಬಿಜೆಪಿ ಕಾರ್ಯಕರ್ತರು ಎನ್ನಲಾಗಿರುವ ಶಿವರಾಜ್ ಪೂಜಾರ್ ಮತ್ತು ಆತನ ಸಹಚರರು ಕೃತ್ಯ ಎಸಗಿದ್ದಾರೆ ಎಂದು ಮೃತನ ತಂದೆ ಕಿಶನ್ ಸಿಂಗ್ ಆರೋಪಿಸಿದ್ದಾರೆ.
ಇಂದು ಮಧ್ಯಾಹ್ನ ಕೆಲಸ ಮುಗಿಸಿ ಮನೆಗೆ ಹೊರಟಿದ್ದ ಗಜೇಂದ್ರ ಸಿಂಗ್ನಿಗೆ ರೌಡಿಶೀಟರ್ ಶಿವರಾಜ್ ಪೂಜಾರ್ ಮತ್ತು ಆತನ ಸಹಚರರು ಅಟ್ಯಾಕ್ ಮಾಡಿದ್ದಾರೆ. ಸಿಕ್ಕ ಸಿಕ್ಕಲ್ಲಿ, ಹೊಟ್ಟೆಗೆ ಚಾಕು ಇರಿದಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಗಜೇಂದ್ರನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲೇ ಕೊನೆಯುಸಿರೆಳಿದಿದ್ದಾರೆ.
ಶಿವರಾಜ್ ಪೂಜಾರ್ ಸಹಚರನೋರ್ವ ಓರ್ವ ಮಹಿಳೆಗೆ ಕೆಟ್ಟದಾಗಿ ಮೆಸೇಜ್ ಮಾಡುತ್ತಿದ್ದನು ಎನ್ನಲಾಗಿದೆ. ಹೀಗಾಗಿ, ಗಜೇಂದ್ರಸಿಂಗ್ ಮೆಸೇಜ್ ಮಾಡದಂತೆ ಆ ಯುವಕನಿಗೆ ತಾಕೀತು ಮಾಡಿ ಬುದ್ಧಿ ಮಾತು ಹೇಳಿದ್ದಾನೆ. ಇದೇ ವಿಚಾರಕ್ಕೆ ನಿನ್ನೆ ಸಣ್ಣಗೆ ಹೊತ್ತಿಕೊಂಡಿದ್ದ ಜಗಳ ಇಂದು ಕೊಲೆಯಲ್ಲಿ ಅಂತ್ಯವಾಗಿದೆ ಎನ್ನಲಾಗಿದೆ.
PublicNext
16/04/2022 10:37 pm