ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬುಡಕಟ್ಟು ಸಹೋದರಿಯರ ಮೇಲೆ ರೇಪ್ ಎಸಗಿ ಕೊಲೆಗೈದ ಕೇಸ್: ಮೂವರಿಗೆ ಮರಣದಂಡನೆ

ಗುವಾಹಟಿ: ಅಸ್ಸಾಂನ ಅಭಯಖುಟಿ ಗ್ರಾಮದಲ್ಲಿ ಕಳೆದ ವರ್ಷ ಬುಡಕಟ್ಟು ಸಮುದಾಯದ ಇಬ್ಬರು ಸಹೋದರಿಯರ ಮೇಲೆ ಅತ್ಯಾಚಾರ ಎಸಗಿ, ಕೊಲೆಗೈದ ಪ್ರಕರಣದ ಸಂಬಂಧ ಮೂವರು ಅಪರಾಧಿಗಳಿಗೆ ಮರಣದಂಡನೆ ವಿಧಿಸಿ ತೀರ್ಪು ಪ್ರಕಟವಾಗಿದೆ.

ಮುಝಮ್ಮಿಲ್ ಶೇಖ್, ನಾಜಿಬುಲ್ ಶೇಖ್ ಮತ್ತು ಫರಿಜುಲ್ ರೆಹಮಾನ್ ಎಂಬ ಅಪರಾಧಿಗಳಿಗೆ ಕೊಕ್ರಝರ್ ಜಿಲ್ಲಾ ನ್ಯಾಯಾಲಯವು ಮರಣದಂಡನೆ ಶಿಕ್ಷೆಯನ್ನು ವಿಧಿಸಿದೆ. ಈ ಹಿಂದೆ ವಿಚಾರಣೆ ನಡೆಸಿದ್ದ ಕೋರ್ಟ್, ಮೂವರು ಅಪರಾಧಿಗಳು ಎಂದು ಹೇಳಿತ್ತು.

ಏನಿದು ಪ್ರಕರಣ:

ಅಭಯಖುಟಿ ಗ್ರಾಮದಲ್ಲಿ ಕಳೆದ ಜೂನ್ 11ರಂದು 14 ಮತ್ತು 16 ವರ್ಷದ ಇಬ್ಬರು ಸಹೋದರಿಯರ ಮೃತದೇಹ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಕೊಲೆ ಶಂಕೆ ವ್ಯಕ್ತಪಡಿಸಿದ ಪೊಲೀಸು ಮೃತ ದೇಹಗಳನ್ನು ವೈದ್ಯಕೀಯ ಮರಣೋತ್ತರ ಪರೀಕ್ಷೆಗೆ ಕಳಿಹಿಸಿದಾಗ ಇದು ಅತ್ಯಾಚಾರ ಮತ್ತು ಕೊಲೆ ಅನ್ನೋದು ಸಾಬೀತಾಗಿತ್ತು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ ಪೊಲೀಸರು ಜೂನ್ 16ರಂದು ಮುಝಮ್ಮಿಲ್ ಶೇಖ್, ನಾಜಿಬುಲ್ ಶೇಖ್ ಮತ್ತು ಫರಿಜುಲ್ ರೆಹಮಾನ್‌ನನ್ನು ಬಂಧಿಸಿದ್ದರು.

Edited By : Vijay Kumar
PublicNext

PublicNext

08/04/2022 05:32 pm

Cinque Terre

61 K

Cinque Terre

11

ಸಂಬಂಧಿತ ಸುದ್ದಿ