ಚಿಕ್ಕಮಗಳೂರು: ಮರಿಯೊಂದಿಗೆ ಇದ್ದ ಎರಡು ಕಾಡಾನೆಗಳಿಗೆ ಜೆಸಿಬಿ ಮೂಲಕ ಕಿರಾತಕರು ಕಿರಿಕಿರಿ ಮಾಡಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಭದ್ರಾ ಅಭಯಾರಣ್ಯದ ತಣಿಗೆಬೈಲು ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಜೆಸಿಬಿ ಸದ್ದಿಗೆ ಬೆಚ್ಚಿದ ಆನೆಗಳು ಹೆದರಿ ಹಿಂದೆ ಹೆಜ್ಜೆ ಇಟ್ಟಿವೆ.
ಇನ್ನು ಆನೆಗಳು ಬೆಚ್ಚಿ ಬಿದ್ದಂತೆಲ್ಲ ಕಿಡಿಗೇಡಿಗಳು ಕೇಕೆ ಹಾಕುತ್ತ ಜೆಸಿಬಿಯನ್ನು ಮತ್ತಷ್ಟು ಮುಂದೆ ನುಗ್ಗಿಸಿದ್ದಾರೆ. ಈ ನಡುವೆ ಆನೆಗಳು ಮರಿಯನ್ನು ರಕ್ಷಿಸಲು ಯತ್ನಿಸಿವೆ. ಈ ವಿಡಿಯೋ ಸದ್ಯ ವೈರಲ್ ಆಗಿದ್ದು, ಕಿಡಿಗೇಡಿಗಳ ಈ ಕೃತ್ಯಕ್ಕೆ ಪ್ರಾಣಿಪ್ರಿಯರು ಆಕ್ರೋಶಿತರಾಗಿದ್ದಾರೆ. ಹಾಗೂ ಇವರ ಮೇಲೆ ಕ್ರಮಕ್ಕೆ ಒತ್ತಾಯಿಸಿದ್ದಾರೆ.
PublicNext
22/03/2022 01:17 pm