ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೆಲಸ ಕೊಟ್ಟವನ ಅಪ್ರಾಪ್ತ ಮಗಳು, ಸೊಸೆಯ ಸ್ನಾನದ ವಿಡಿಯೋ ರೆಕಾರ್ಡ್‌- ಕಾಮುಕ ಅರೆಸ್ಟ್

ಮುಂಬೈ: ಕೆಲಸ ಕೊಟ್ಟವನ ಅಪ್ರಾಪ್ತ ಮಗಳು ಹಾಗೂ ಅಪ್ರಾಪ್ತ ಸೊಸೆ ಬಟ್ಟೆ ಬದಲಾಯಿಸುವ, ಸ್ನಾನ ಮಾಡುತ್ತಿರುವ ದೃಶ್ಯವನ್ನು ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿದ ಕಾಮುಕನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯು 27 ವರ್ಷದವನಾಗಿದ್ದು, ಮನೆಕೆಲಸ ಮಾಡುತ್ತಿದ್ದ. ಈತ ತನಗೆ ಉದ್ಯೋಗ ನೀಡಿದ ವ್ಯಕ್ತಿಯ 13 ವರ್ಷದ ಮಗಳು ಮತ್ತು 11 ವರ್ಷದ ಸೊಸೆ ಬಟ್ಟೆ ಬದಲಾಯಿಸುವಾಗ ಅಥವಾ ಸ್ನಾನ ಮಾಡುವಾಗ ಅವರ ಫೋಟೋ ಮತ್ತು ವಿಡಿಯೋಗಳನ್ನು ಸೆರೆ ಹಿಡಿದಿದ್ದ. ಪೊಲೀಸರ ಪ್ರಕಾರ, 13 ವರ್ಷದ ಬಾಲಕ ತನ್ನ ಫೋನ್‌ನಲ್ಲಿ ಆಟವಾಡುತ್ತಿದ್ದಾಗ ಬಾಲಕಿಯರ ಬೆತ್ತಲ್ಲೇ ಚಿತ್ರಗಳನ್ನು ನೋಡಿದ್ದಾನೆ. ಈ ವಿಚಾರವನ್ನು ಬಾಲಕ ತಕ್ಷಣವೇ ತನ್ನ ಪೋಷಕರಿಗೆ ತಿಳಿಸಿದ್ದಾನೆ.

ಈ ಸಂಬಂಧ ಬಾಲಕಿಯರ ಪೋಷಕರು ದೂರು ನೀಡುತ್ತಿದ್ದಂತೆ ಮುಂಬೈ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಜೊತೆಗೆ ಆತ ವಿಡಿಯೋ ರೆಕಾರ್ಡ್‌ ಮಾಡಿದ್ದ ಮೊಬೈಲ್‌ ಅನ್ನು ವಶಕ್ಕೆ ಪಡೆದಿದ್ದಾರೆ.

Edited By : Vijay Kumar
PublicNext

PublicNext

04/03/2022 07:51 pm

Cinque Terre

94.07 K

Cinque Terre

1

ಸಂಬಂಧಿತ ಸುದ್ದಿ