ಮೈಸೂರು: ಅದು ಹೆಣ್ಣಾಗಲಿ, ಗಂಡಾಗಲಿ ಪ್ರತಿಯೊಬ್ಬರಿಗೂ ವಿವಾಹದ ಬಗ್ಗೆ ತಮ್ಮದೇ ಅದ ಕನಸುಗಳಿರುತ್ತದೆ. ಕೆಲವರು ಪ್ರೇಮ ವಿವಾಹವನ್ನು ಬಯಸಿದರೆ, ಇನ್ನು ಕೆಲವರು ನಿಶ್ಚಯ ವಿವಾಹವನ್ನು ಬಯಸುತ್ತಾರೆ.
ಸದ್ಯ ಇಲ್ಲೊಂದು ಪ್ರಕರಣದಲ್ಲಿ ಪೋಷಕರ ವಿರೋಧದ ನಡುವೆ ಪರಸ್ಪರ ಪ್ರೀತಿಸಿ ಮದುವೆಯಾದ ಜೋಡಿ ಕುಣಿಕೆಗೆ ಕೊರಳೊಡ್ಡಿದ ಘಟನೆ ಹುಣಸೂರು ತಾಲೂಕಿನ ಸಿಂಗರಮಾರನಹಳ್ಳಿಯಲ್ಲಿ ನಡೆದಿದೆ.
ಪ್ರೇಮ ವಿವಾಹವಾದ ನಾಲ್ಕು ತಿಂಗಳಿಗೆ ನವದಂಪತಿ ರಾಕೇಶ್ (25),ಅರ್ಚನಾ(20) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಎರಡು ವರ್ಷಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದ ರಾಕೇಶ್, ಅರ್ಚನಾ ಇಬ್ಬರೂ ಒಂದೇ ಊರಿನ ಅಕ್ಕಪಕ್ಕದ ಮನೆಯವರು.
ಪೋಷಕರು ವಿರೋಧದ ನಡುವೆಯೂ ನಾಲ್ಕು ತಿಂಗಳ ಹಿಂದೆಯಷ್ಟೇ ಓಡಿ ಹೋಗಿ ಮದುವೆಯಾಗಿದ್ದರು. ಫೆ.22 ರ ತಡರಾತ್ರಿ ಗ್ರಾಮಕ್ಕೆ ಬಂದ ಈ ಜೋಡಿ ಹಕ್ಕಿ ಊರ ಹೊರಲವಯದಲ್ಲಿ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇವರಿಬ್ಬರು ಅನ್ಯ ಜಾತಿಗೆ ಸೇರಿದ ಹಿನ್ನಲೆಯಲ್ಲಿ ಪೋಷಕರ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ಸದ್ಯ ಸ್ಥಳಕ್ಕೆ ಬಿಳಿಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
PublicNext
24/02/2022 10:01 am