ಕಲಬುರ್ಗಿ : ಚಿಕ್ಕಮ್ಮ ಅಂದ್ರೆ ತಾಯಿ ಸಮಾನ ಅವಳಿಗೂ ನಾವು ಅಮ್ಮನ ಸ್ಥಾನ ಕೊಟ್ಟಿರ್ತೇವೆ. ಆಕೆ ಜೊತೆಗೆ ಅಕ್ರಮ ಸಂಬಂಧ ಅಂದ್ರೆ ನಿಜಕ್ಕೂ ಅಸಹ್ಯ ಅನಿಸುತ್ತೆ. ಇಂಥಹದ್ದೆ ಒಂದು ಅಕ್ರಮ ಸಂಬಂಧ ಒಂದು ಕೊಲೆಯಲ್ಲಿ ಅಂತ್ಯವಾಗಿದೆ.
ಈ ಕೊಲೆ ನಂತರ ಆರೋಪಿಗಳು ಎಸ್ಕೇಪ್ ಆಗಲು ಮಾಡಿದ್ದ ಪ್ಲಾನ್ ನ ಭೇದಿಸುವಲ್ಲಿ ರೈಲ್ವೇ ಪೊಲೀಸರು ಯಶಸ್ವಿಯಾಗಿದ್ದಾರೆ.
ಹೌದು ಕಲಬುರಗಿಯಲ್ಲಿ ಫೋಟೊಗ್ರಾಫರ್ ಶಿವಕುಮಾರ್ ಕೊಲೆ ಪ್ರಕರಣವನ್ನ ರೈಲ್ವೆ ಪೊಲೀಸು ಭೇದಿಸಿದ್ದಾರೆ.
ಜನವರಿ 25 ರಂದು ಅಳಂದಾದವಾಡಿ ರೈಲ್ವೇ ಟ್ರಾಕ್ ಬಳಿ ಈ ಶವ ನೋಡಿ ಎಲ್ಲರೂ ರೈಲಿಗೆ ತಲೆ ಕೊಟ್ಟು ಸತ್ತಿದ್ದಾನೆ ಎಂದುಕೊಂಡಿದ್ದರು. ಆದ್ರೆ ಪೊಲೀಸರು ಎಲ್ಲರಂತೆ ನೋಡದೆ ತನಿಖೆ ಮುಂದುವರೆಸಿದಾಗ ನಿಜಾಂಶ ವೈರಲ್ ಆಗಿದೆ.
ತನಿಖೆಯಲ್ಲಿ ಕತ್ತು ಕುಯ್ದು ಕೊಲೆ ಮಾಡಿ ಟ್ರಾಕ್ ಮೇಲೆ ಹಾಕಿರುವುದು ಬೆಳಕಿಗೆ ಬಂದಿದೆ.ಈ ಕೊಲೆಗೆ ಮುಖ್ಯ ಕಾರಣ ಚಿಕ್ಕಮ್ಮನೊಂದಿಗಿನ ಅಕ್ರಮ ಸಂಬಂಧ .ಸದ್ಯ ಮುಖ್ಯ ಆರೋಪಿ ಮಹಾಂತೇಶ್ ಆಳಂದಕರ್ ಅವ್ರ ತಾಯಿ ಜೊತೆ ಚಿಕ್ಕಪ್ಪನ ಮಗನಾಗಿದ್ದ ಶಿವಕುಮಾರ್ ಅಕ್ರಮ ಸಂಬಧ ಹೊಂದಿದ್ದ. ಈ ವಿಚಾರವಾಗಿ ಮಹಾಂತೇಶ್ ಸಾಕಷ್ಟು ಬಾರಿ ಬುದ್ದಿ ಹೇಳಿದ್ರು ಕೇಳಲ್ಲಿಲ್ಲ. ಇದಕ್ಕೆ ಪ್ರತಿಯಾಗಿ ತನ್ನ ಸಂಬಂಧಿಕಾರಾದ ಬಸವರಾಜ್ ಸಲಗಾರ್ , ಫಕರಿಪ್ಪ ಸಲಗಾರ್ , ಸಿದ್ದಾರೂಢ ಕೋರಬಾರ್ , ಅಶೋಕ ಜಮಾದಾರ್ ಸೇರಿ ಶಿವಕುಮಾರ್ ನ ಕೊಲೆ ಮಾಡಿ ರೈಲ್ವೆ ಟ್ರಾಕ್ ಮೇಲೆ ಹಾಕಿದ್ರು.
ವಿಚಾರಣೆಯಲ್ಲಿ ಕೊಲೆ ಮಾಡಿದ್ದಾಗಿ ಆರೋಪಿಗಳು ಒಪ್ಪಿ ಕೊಂಡಿದ್ದಾರೆ.
PublicNext
02/02/2022 04:49 pm