ಹಾವೇರಿ : ಹಾವೇರಿ ನಗರದ ಇಜಾರಿಲಕಮಾಪುರ ಬಳಿಯಲ್ಲಿರುವ ನೇತಾಜಿನಗರದಲ್ಲಿ ಹಳೆ ಕಾಲದ ಹ್ಯಾಂಡ್ ಗ್ರೈನೈಡ್ ಪತ್ತೆಯಾದ ಬೆನ್ನಲ್ಲೇ ಶ್ವಾನದಳದೊಂದಿಗೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಸ್ಥಳೀಯರು ಸ್ಥಳಕ್ಕೆ ಹೋಗದಂತೆ ಬಿಗಿ ಭದ್ರತೆ ಒದಗಿಸಲಾಗಿದೆ. ಇಂದು ದಾವಣಗೇರಿ ಅಥವಾ ಬೆಂಗಳೂರಿನಿಂದ ಎಕ್ಸಪರ್ಟ್ ಶೋಧ ತಂಡ ಆಗಮಿಸಿ ಅಪಾಯಕಾರಿ ವಸ್ತು ದೊರೆತ ಸ್ಥಳದವರಿಂದ ದೂರು ಪಡೆದು ತನಿಖೆ ನಡೆಸಲಿದ್ದಾರೆ. ರವಿ ಮುಷ್ಠಿ ಎಂಬುವವರ ಖಾಲಿ ಜಾಗದಲ್ಲಿ ಪತ್ತೆಯಾದ ಹ್ಯಾಂಡ್ ಗ್ರೈನೈಡ್ ನಿಂದ ಸ್ಥಳೀಯರಲ್ಲಿ ಅತಂಕ ಮನೆ ಮಾಡಿದೆ.
PublicNext
21/01/2022 10:45 am