ಭೋಪಾಲ್ : ಆತ ತಳ್ಳುವ ಗಾಡಿಯಲ್ಲಿ ಹಣ್ಣು ವ್ಯಾಪಾರ ಮಾಡಿಕೊಂಡು ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿದ್ದ. ರಸ್ತೆ ರಸ್ತೆಯಲ್ಲಿ ಹಣ್ಣುಗಳ ವ್ಯಾಪಾರ ಮಾಡುವುದೇ ಆತನ ಕಾಯಕವಾಗಿತ್ತು.
ಅದೇ ರೀತಿ ಕಳೆದ ನಾಲ್ಕು ದಿನಗಳ ಹಿಂದೆ ಭೋಪಾಲ್ ನ ಅಯೋಧ್ಯಾನಗರದಲ್ಲಿ ತನ್ನ ಕೈಗಾಡಿಯನ್ನು ತಳ್ಳುತ್ತಾ ಸಾಗುವಾಗ ಅಚಾನಕ್ಕಾಗಿ ಖಾಸಗಿ ವಿಶ್ವವಿದ್ಯಾನಿಲಯದಲ್ಲಿ ಕೆಲಸ ಮಾಡುವ ಮಹಿಳೆ ಕಾರಿಗೆ ಈ ಬಡಪಾಯಿ ಹಣ್ಣು ವ್ಯಾಪಾರಿಯ ತಳ್ಳುವ ಗಾಡಿ ಟಚ್ ಆಗಿದೆ. ಇದರಿಂದ ಕಾರಿಗೆ ಸಣ್ಣ ಸ್ಕ್ರಾಚ್ ಕೂಡಾ ಬಿದ್ದಿದೆ.
ಇದರಿಂದ ಕೋಪಿತಗೊಂಡ ಕಾರಿನ ಮಾಲೀಕಳು ತನ್ನ ಕಾರಿನಿಂದ ಕೆಳಗಿಳಿದು ಬಂದು ತಳ್ಳುವ ಗಾಡಿಯಲ್ಲಿದ್ದ ಹಣ್ಣುಗಳನ್ನೆಲ್ಲಾ ರಸ್ತೆಗೆ ಎಸೆದು ತನ್ನ ಕೋಪ ತೀರಿಸಿಕೊಂಡಿದ್ದಾಳೆ.
ಸದ್ಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು ಮಹಿಳೆ ಕಾರ್ಯಕ್ಕೆ ಎಲ್ಲರೂ ಹಿಡಿ ಶಾಪ ಹಾಕಿದ್ದಾರೆ. ತಾನಾಗಿಯೇ ಒಂದು ಅಪಘಾತ ಮಾಡಿಕೊಂಡಿದ್ದರೆ ಸುಮ್ಮನಿರುತ್ತಿರಲಿಲ್ಲವೇ? ಎಂದು ಕೆಲವರು ಕಾಮೆಂಟ ಮಾಡಿದ್ದಾರೆ. ಇನ್ನು ಕೆಲವರು ತಿನ್ನುವ ಹಣ್ಣನ್ನು ರಸ್ತೆಗೆ ಎಸೆದರೆ ಏನು ಬಂತು ಎಂದು ಪ್ರಶ್ನಿಸಿದ್ದಾರೆ. ಅದೇನೆ ಇರಲಿ ಸಮಾಧಾನದಿಂದ ವಸ್ತುಸ್ಥಿತಿಯನ್ನು ತಿಳಿಗೊಳಿಸಬೇಕಾಗಿದ್ದ ಮಹಿಳೆ ಕೆಂಡಾಮಂಡಲವಾಗಿದ್ದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.
PublicNext
11/01/2022 05:38 pm