ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ: ಸೈನ್ಸ್ ಕಾಲೇಜಿನ ಉಪನ್ಯಾಸಕನ ಅನುಮಾನಾಸ್ಪದ ಸಾವು

ವಿಜಯಪುರ:ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟ ಎಕ್ಸ್‌ಪರ್ಟ್ ಪಿಯು ಸೈನ್ಸ್ ಕಾಲೇಜಿನ ಉಪನ್ಯಾಸಕ ಅನುಮಾನಾಸ್ಪದವಾಗಿಯೇ ಮೃತಪಟ್ಟ ಘಟನೆ ಈಗ ವರದಿ ಆಗಿದೆ.

ಅನುಮಾನಾಸ್ಪದವಾಗಿಯೇ ಮೃತಪಟ್ಟ ಉಪನ್ಯಾಸಕರನ್ನ ಕಾಶೀನಾಥ್ ಪುರಾಣಿಕಮಠ (27) ಎಂದು ಗುರುತಿಸಲಾಗಿದೆ.

ಮಲಗಲದಿನ್ನಿ ಗ್ರಾಮದ ಬಳಿ ಬೈಕ್ ಮೇಲೆ ತಾಳಿಕೋಟಿಗೆ ತೆರಳುವ ವೇಳೆ ಅಪಘಾತದ ರೀತಿಯಲ್ಲಿಯೇ ಈ ಅವಘಡ ನಡೆದಿದೆ. ನಿತ್ಯ ತಾಳಿಕೋಟಿಗೆ ಹೋಗಿ ಬಂದು ಮಾಡುತ್ತಿದ್ದ ಉಪನ್ಯಾಸಕ ಕಾಶೀನಾಥ್.

ಆದರೆ ನಿನ್ನೆ ರಾತ್ರಿ 8.30ಕ್ಕೆ ಊರಿನ ಕಡೆಗೆ ಬೈಕ್ ಮೇಲೆ ತೆರಳಿದ್ದರು.ಈಗ ನೋಡಿದರೆ ಶವವಾಗಿ ಪತ್ತೆ ಆಗಿದ್ದಾರೆ. ಇದು ಕೊಲೆ ಅಂತಲೇ ಪಾಲಕರು ಸಂಶಯ ವ್ಯಕ್ತಪಡಿಸಿದ್ದಾರೆ.

ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

Edited By :
PublicNext

PublicNext

25/12/2021 02:45 pm

Cinque Terre

33.36 K

Cinque Terre

1