ದೆಹಲಿ : ಪೂರ್ವ ದೆಹಲಿಯ ಜನನಿಬಿಡ ರಸ್ತೆ ಮಧ್ಯೆ ಮದ್ಯದ ಅಮಲಿನಲ್ಲಿರುವ ಯುವತಿಯೋರ್ವಳು ಹೈಡ್ರಾಮಾ ಮಾಡಿರುವ ಘಟನೆ ಮಂಡವಾಲಿ ಪೊಲೀಸ್ ಠಾಣೆ ಬಳಿಯ ಪೂರ್ವ ದೆಹಲಿ ಪ್ರದೇಶದಲ್ಲಿ ನಡೆದಿದೆ.
ಕುಡಿದು ಕಾರು ಚಲಾಯಿಸುತ್ತಿದ್ದ ಯುವತಿ ಹಿಂಬದಿಯಿಂದ ಯುವಕನೋರ್ವ ಕಾರಿಗೆ ಗುದ್ದಿದ್ದಾಳೆ. ಮಾತ್ರವಲ್ಲದೆ ಆ ಯುವಕನೊಂದಿಗೆ ಜಗಳಕ್ಕೆ ಮುಂದಾಗಿದ್ದಾಳೆ. ಅವಾಚ್ಯ ಶಬ್ದಗಳಿಂದಲೂ ನಿಂದಿಸಿದ್ದಾಳೆ.
ಇನ್ನು ನಡು ರಸ್ತೆಯಲ್ಲಿ ಇಬ್ಬರಿಬ್ಬರ ಗಲಾಟೆಯಿಂದಾಗಿ ಬರೋಬ್ಬರಿ ಒಂದು ಗಂಟೆ ಕಾಲ ಟ್ರಾಫಿಕ್ ಜಾಮ್ ಸಹ ಉಂಟಾಗಿದೆ. ಇನ್ನು ಯುವತಿ ಆವಸ್ಥೆ ಕಂಡ ಯುವಕ ಅವಳೊಂದಿಗೆ ಗುದ್ದಾಡುವುದನ್ನು ಬಿಟ್ಟು ಘಟನೆಯನ್ನು ತನ್ನ ಮೊಬೈಲ್ ನಲ್ಲಿ ಚಿತ್ರಿಕರಿಸಿದ್ದಾನೆ. ವಿಡಿಯೋದಲ್ಲಿ ಯುವತಿ ಯುವಕನ ಕಾರಿಗೆ ಒದೆಯುವ ರಸ್ತೆಯಲ್ಲಿ ತೆಲಾಡುವ ದೃಶ್ಯಗಳು ಸೆರೆಯಾಗಿವೆ.
ಇನ್ನು ಇವರ ಗಲಾಟೆ ಬಗೆಹರಿಸಲು ಸಂಚಾರ ಪೊಲೀಸರ ಹರಸಾಹಸ ಪಟ್ಟಿದ್ದಾರೆ. ಕೊನೆಗೆ ಪಿಸಿಆರ್ ಸ್ಥಳಕ್ಕಾಗಮಿಸಿ ಯುವತಿ ಮತ್ತು ಯುವಕನ್ನು ಠಾಣೆಗೆ ಕರೆದೊಯ್ದಿದ್ದಿದ್ದಾರೆ.
PublicNext
20/12/2021 09:41 pm