ಮುಂಬೈ: ಅಕ್ರಮ ದಂಧೆ ನಡೆಸುವವರು ಏನೆಲ್ಲಾ ಪ್ಲ್ಯಾನ್ ಮಾಡಿರುತ್ತಾರೆ ಎನ್ನುವುದು ಗೊತ್ತಾದರೆ ನಿಮ್ಗೆ ನಿಜಕ್ಕೂ ಶಾಕ್ ಆಗುತ್ತದೆ.
ಅಂಧೇರಿ ಏರಿಯಾದಲ್ಲಿರುವ ಡಾನ್ಸ್ ಬಾರ್ ಮೇಲೆ ಪೊಲೀಸರು ನಡೆಸಿದ ದಾಳಿಯ ವೇಳೆ ಸ್ಫೋಟಕ ಸಂಗತಿಯೊಂದು ಬೆಳಕಿಗೆ ಬಂದಿದೆ.
ಈ ಕೋಣೆಯೊಂದರಲ್ಲಿ ಕೂಡಿಟ್ಟಿದ್ದ 17 ಮಹಿಳೆಯರನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಗ್ರಾಹಕರ ಮುಂದೆ ಡಾನ್ಸ್ ಮಾಡಲು ಮಹಿಳೆಯರನ್ನು ಬಳಸಿಕೊಳ್ಳಲಾಗುತ್ತದೆ ಎಂಬ ಸುಳಿವಿನ ಮೇಲೆ ದೀಪಾ ಬಾರ್ ಮೇಲೆ ಸ್ಥಳೀಯ ಪೊಲೀಸರು ದಾಳಿ ನಡೆಸಿದ ವೇಳೆ ಈ ಸಂಗತಿ ರಿವೀಲ್ ಆಗಿದೆ.
ಇನ್ನು ಪೊಲೀಸರು ಬರುವ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ರಹಸ್ಯ ಕೋಣೆಯ ಮುಂದೆ ಸುಧಾರಿತ ಎಲೆಕ್ಟ್ರಾನಿಕ್ ವ್ಯವಸ್ಥೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ದಾಳಿ ವೇಳೆ ಎಲ್ಲಿಯೂ ಮಹಿಳೆಯರು ಸಿಗದ ವೇಳೆ ಕನ್ನಡಿ ಮೇಲೆ ಕಾಣು ಹಾಯಿಸಿದ ಪೊಲೀಸರು ಕನ್ನಡಿ ಒಡೆದಾಗ ಹಿಂದೊಂದು ಕೋಣೆ ಕಂಡು ಶಾಕ್ ಆಗಿದ್ದಾರೆ. ಮಾತ್ರವಲ್ಲದೆ 17 ಜನ ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆ.
PublicNext
14/12/2021 03:56 pm