ಬೆಂಗಳೂರು : ಬೆಂಗಳೂರಿನ ಅಮೃತಹಳ್ಳಿ ವೀರಣ್ಣಪಾಳ್ಯ ನಿವಾಸಿಯಾಗಿದ್ದ, ಪ್ರೀತಿಸಿ ಮದುವೆಯಾಗಿದ್ದ ಮಹಿಳಾ ಟೆಕ್ಕಿ ಸಂಗೀತಾ ಆತ್ಮಹತ್ಯೆ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಹೌದು ಡಿಸೆಂಬರ್ 10 ರಂದು ಸಂಗೀತಾ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಆ ವೇಳೆ ಅಲ್ಲೊಂದು ಡೆತ್ ನೋಟ್ ಕೂಡಾ ಸಿಕ್ಕಿತ್ತು. ಅದರ ಆಧಾರದ ಮೇಲೆ ಸಂಗೀತಾ ಪತಿ ವಿನಯ್ ನನ್ನು ಪೊಲೀಸರು ವಿಚಾರಣೆಗೂ ಒಳಪಡಿಸಿದ್ದರು.
ಆದ್ರೆ ಈ ಕೇಸ್ ನಲ್ಲಿ ಇದೀಗ ಭಾರಿ ತಿರುವೊಂದು ಬಂದಿದೆ. ಪೊಲೀಸರ ಮುಂದೆ ಮಾತನಾಡುವಾಗ ಪತಿ ವಿನಯ್ ಹೇಳಿದ್ದು ಹೀಗೆ ನಾನು ಮತ್ತು ಸಂಗೀತಾ ನಾಲ್ಕು ವರ್ಷ ಪ್ರೀತಿಸಿ ಮದುವೆಯಾಗಿದ್ದೆವು ಅವಳ ಮೇಲಿನ ಅತಿಯಾದ ಪ್ರೀತಿಯಿಂದ ತನ್ನ ಹೆಸರನ್ನು ಕೈ ಮೇಲೆ ಟ್ಯಾಟೂ ಸಹ ಹಾಕಿಸಿಕೊಂಡಿದ್ದನ್ನು ತೋರಿಸಿದ್ದಾನೆ.
ಸದ್ಯ ನನ್ನ ಅತಿಯಾದ ಪ್ರೀತಿಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ ಎಂದು ನನಗೆ ಗೊತ್ತಿರಲಿಲ್ಲ ಎಂಬುದಾಗಿ ವಿನಯ್ ಪೊಲೀಸರ ಮುಂದೆ ಹೇಳಿಕೆ ನೀಡಿರುವುದು ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ.
PublicNext
13/12/2021 09:08 pm