ಮುಂಬೈ: ಜೋರಾಗಿ ಹಾಡು ಹಾಕಿದ್ದಕ್ಕೆ ನೆರೆ ಮನೆಯ ವ್ಯಕ್ತಿಯನ್ನು ಕೊಲೆಗೈದಿರುವ ಘಟನೆ ಮುಂಬೈನ ಮಾಲ್ವಾನಿಯ ಅಂಬುಜ್‌ವಾಡಿ ಪ್ರದೇಶದಲ್ಲಿ ಬುಧವಾರ ರಾತ್ರಿ ಘಟನೆ ನಡೆದಿದೆ.
ಸುರೇಂದ್ರ ಕುಮಾರ್ ಗುನ್ನಾರ್ (40) ಕೊಲೆಯಾದ ವ್ಯಕ್ತಿ. ಸೈಫ್ ಅಲಿ ಚಂದ್ ಅಲಿ ಶೇಖ್ (25) ಕೊಲೆಗೈದ ನೆರೆ ಮನೆಯ ವ್ಯಕ್ತಿ. ಸುರೇಂದ್ರ ಜೋರಾಗಿ ಹಾಡು ಹಾಕಿದ್ದರಿಂದ ಆಕ್ರೋಶಗೊಂಡ ಸೈಫ್ ಅಲಿ ಹಾಡಿನ ಧ್ವನಿಯ ಪ್ರಮಾಣ ಕಡಿಮೆ ಮಾಡುವಂತೆ ತಿಳಿಸಿದ್ದಾನೆ. ಈ ವೇಳೆ ಧ್ವನಿ ಕಡಿಮೆ ಮಾಡಲು ಸುರೇಂದ್ರ ನಿರಾಕರಿಸಿದ್ದರಿಂದ ಸೈಫ್ ಅಲಿ ಜಗಳ ಆರಂಭಿಸಿದ್ದಾನೆ. ಈ ವೇಳೆ ಕೋಪಗೊಂಡ ಸೈಫ್ ಅಲಿ ನೆರೆ ಮನೆಯ ಸುರೇಂದ್ರ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ತೀವ್ರ ಗಾಯಗೊಂದ ಸುರೇಂದ್ರ ಕುಮಾರ್ ಪ್ರಜ್ಞೆ ತಪ್ಪಿ ಬಿದ್ದಿದ್ದ. ತಕ್ಷಣವೇ ಆತನನ್ನು ಹತ್ತಿರದ ಆಸ್ಪತ್ರೆಗೆ ಕೊಂಡೊಯ್ಯುವ ವೇಳೆಗೆ ಸಾವಿಗೀಡಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ಭಾರತೀಯ ದಂಡ ಸಂಹಿತೆ 302 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
PublicNext
09/12/2021 06:10 pm