ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಯ್ ಫ್ರೆಂಡ್ ಜೊತೆ ಸೇರಿ ಅಪ್ಪನನ್ನೇ ಕೊಲೆಗೈದ ಫಸ್ಟ್ ಪಿಯುಸಿ ವಿದ್ಯಾರ್ಥಿನಿ

ಬೆಂಗಳೂರು: ಅಪ್ರಾಪ್ತ ವಯಸ್ಸಿನ ಹುಡುಗ-ಹುಡುಗಿಯ ಪ್ರೇಮ ವಿಕೃತಿಗೆ ಕಾರಣವಾದದ್ದನ್ನು ನಾವು ನೋಡಿದ್ದೇವೆ. ಆದ್ರೆ ಇಲ್ಲೊಂದು ಅಪ್ರಾಪ್ತ ಜೋಡಿ ಬುದ್ಧಿ ಹೇಳಿದ ಅಪ್ಪನನ್ನೇ ಕೊಲೆ ಮಾಡಿದೆ.

ದೀಪಕ್ ಕುಮಾರ್ ಸಿಂಗ್ ಎಂಬ 46 ವರ್ಷ ವಯಸ್ಸಿನ ವ್ಯಕ್ತಿಯೇ ಕೊಲೆಯಾದವರು. ವೃತ್ತಿಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದ ಇವರು ಬೆಂಗಳೂರಿನ ಯಲಹಂಕ ನ್ಯೂ ಟೌನ್ ನಿವಾಸಿ.

'ಜಿಕೆವಿಕೆ'ಯಲ್ಲಿ ಕೆಲಸ ಮಾಡುತ್ತಿದ್ದ ಇವರು ಮೂಲತಃ ಬಿಹಾರದವರು. ಕೇವಲ 17 ವರ್ಷ ವಯಸ್ಸಿನ ಇವರ ಮಗಳು ಹತ್ತಿರದ ಖಾಸಗೀ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದಳು‌. ಇತ್ತೀಚೆಗೆ ತನ್ನದೇ ವಯಸ್ಸಿನ ಹುಡುಗನನ್ನು ಪ್ರೀತಿಸುತ್ತಿದ್ದಳು. ಈ ವಿಷಯ ತಿಳಿದ ಅಪ್ಪ ದೀಪಕ್ ಮಗಳನ್ನು ಕರೆದು ಬುದ್ಧಿ ಹೇಳಿದ್ದರು. ಆದ್ರೆ ಮಗಳು ಹಳೆ ಚಾಳಿ ಮುಂದುವರೆಸಿದಾಗ ಮಗಳನ್ನು ಕೋಣೆಯಲ್ಲಿ ಕೂಡಿ ಹಾಕಿದ ದೀಪಕ್ ಆಕೆಗೆ ಥಳಿಸಿದ್ದರು ಎನ್ನಲಾಗಿದೆ. ಈ ವೇಳೆ ದೀಪಕ್ ಅವರ ಪತ್ನಿ ಅನಾರೋಗ್ಯ ಕಾರಣದಿಂದ ಕಲಬುರಗಿಗೆ ತೆರಳಿದ್ದರು.

ತಂದೆತ ಥಳಿತದಿಂದ ಕುಪಿತಗೊಂಡ ಆಕೆ ಇದೇ ಸರಿಯಾದ ಸಮಯ ಎಂದುಕೊಂಡು ತನ್ನ ಪ್ರಿಯಕರನಿಗೆ ತಂದೆಯನ್ನು ಮುಗಿಸಿಬಿಡುವ ಪ್ಲ್ಯಾನ್ ಹೇಳಿದ್ದಾಳೆ‌. ಭಾನುವಾರ ತಡರಾತ್ರಿ ಅಪ್ರಾಪ್ತ ವಯಸ್ಸಿನ ತನ್ನ ಮೂವರು ಸ್ನೇಹಿತರನ್ನು ಕರೆದುಕೊಂಡು ಬಂದ ಪ್ರಿಯಕರ ತನ್ನ ಪ್ರಿಯತಮೆಯ ತಂದೆ ದೀಪಕ್ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾನೆ. ಈ ವೇಳೆ ದೀಪಕ್ ಚೀರಾಟ ಕೇಳಿ ನೆರೆ-ಹೊರೆಯವರು ಧಾವಿಸಿದಾಗ ವಿಷಯ ಗೊತ್ತಾಗಿದೆ.

ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಕೊಲೆಗೈದ ಪಾಗಲ್ ಪ್ರೇಮಿಗಳು ಹಾಗೂ ಇತರ ಮೂವರು ಸಹಚರರಿಗಾಗಿ ಶೋಧ ನಡೆಸುತ್ತಿದ್ದಾರೆ.

Edited By : Nagaraj Tulugeri
PublicNext

PublicNext

22/11/2021 08:09 pm

Cinque Terre

73.08 K

Cinque Terre

16