ಬೆಂಗಳೂರು: ಹೆಸರಾಂತ ಉದ್ಯಮಿ ಆನಂದ್ ಮಹಿಂದ್ರಾ ಅವರ ಹೆಸರಿನಲ್ಲಿ ಕಿಡಿಗೇಡಿಗಳು ವ್ಯಕ್ತಿತ್ವಕ್ಕೆ ಚ್ಯುತಿ ತರುವಂತೆ ಟ್ವೀಟ್ ಮಾಡಿದ್ದಾರೆ. ಈ ಬಗ್ಗೆ ಆಕ್ರೋಶಗೊಂಡಿರುವ ಅವರು ಕಾನೂನು ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ಆನಂದ್ ಮಹಿಂದ್ರಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಸದ್ಯ ಅವರ ಹೆಸರಿನಲ್ಲಿ ಮಾಡಲಾದ ಟ್ವೀಟ್‌ನ ಕೋಟ್ ಒಂದು ಹರಿದಾಡುತ್ತಿದೆ. ಇದರ ಸ್ಕ್ರೀನ್ ಶಾಟ್ ಹಂಚಿಕೊಂಡಿರುವ ಅವರು ನಾನು ಈ ರೀತಿ ಎಲ್ಲಿಯೂ ಹೇಳಿಲ್ಲ. ಇದಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ಇದನ್ನು ನಾನೇ ಹೇಳಿದ್ದು ಎಂಬಂತೆ ಬಿಂಬಿಸಿದವರ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ.
ನಮ್ಮ ಬಹುತೇಕ ಪುರುಷರು ಸಾಮಾಜಿಕ ಮಾಧ್ಯಮಗಳಲ್ಲಿ ಮಹಿಳೆಯನ್ನು ಹಿಂಬಾಲಿಸುವುದರಲ್ಲಿ ಕಳೆಯುತ್ತಾರೆ ಹಾಗೂ ಕ್ರೀಡಾ ತಂಡಗಳ ಮೇಲೆ ಅತಿಯಾದ ನಿರೀಕ್ಷೆ ಹೊಂದಿರುತ್ತಾರೆ. ಮತ್ತು ರಾಜಕಾರಣಿಗಳ ಕೈಯಲ್ಲಿ ತಮ್ಮ ಕನಸುಗಳನ್ನು ಭಗ್ನಗೊಳಿಸಿಕೊಳ್ಳುತ್ತಾರೆ ಎಂದು ಕಿಡಿಗೇಡಿಗಳು ಆನಂದ್ ಮಹಿಂದ್ರಾ ಹೆಸರಲ್ಲಿ ಕೋಟ್ ಮಾಡಿದ್ದರು.
PublicNext
22/11/2021 03:43 pm